Home ಕ್ರೈಂ ನ್ಯೂಸ್ ಹಂತಕ ಪತಿ ಡಾ. ಮಹೇಂದ್ರ ರೆಡ್ಡಿಯ ‘PhonePe’ ಚಾಟ್ ರಹಸ್ಯ ಸ್ಫೋಟ: ಬಯಲಾಯ್ತು ಹತ್ಯೆಯ ಭೀಕರ ಸಂಚು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಹಂತಕ ಪತಿ ಡಾ. ಮಹೇಂದ್ರ ರೆಡ್ಡಿಯ ‘PhonePe’ ಚಾಟ್ ರಹಸ್ಯ ಸ್ಫೋಟ: ಬಯಲಾಯ್ತು ಹತ್ಯೆಯ ಭೀಕರ ಸಂಚು!

Share
ಹಂತಕ
Share

ಬೆಂಗಳೂರು: ಸುಮಾರು ಒಂದು ವರ್ಷದ ಹಿಂದೆ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರ ಸಾವಿನ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ತನ್ನ ಪತ್ನಿಯನ್ನೇ ಅರಿವಳಿಕೆ ಮದ್ದು (Anesthesia) ನೀಡಿ ಸಾಯಿಸಿದ್ದ ಪತಿ, ಸರ್ಜನ್, ಹಂತಕ ಡಾ. ಮಹೇಂದ್ರ ರೆಡ್ಡಿ, ಪೊಲೀಸರಿಗೆ ಸಿಕ್ಕಿಬೀಳದಿರಲು ನಡೆಸಿದ್ದ ಚಾಣಾಕ್ಷ ಸಂಚು ಈಗ ಡಿಜಿಟಲ್ ಸಾಕ್ಷ್ಯಗಳ ಮೂಲಕ ಬಯಲಾಗಿದೆ.

ಏನಿದು ಘಟನೆ?

2025ರ ಏಪ್ರಿಲ್ 21ರಂದು ಡಾ. ಕೃತಿಕಾ ರೆಡ್ಡಿ ಮನೆಯಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಸಹಜ ಸಾವು ಎಂದು ಬಿಂಬಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಅತಿಯಾದ ಪ್ರಮಾಣದ ‘ಪ್ರೊಪೊಫಾಲ್’ (Propofol) ಎಂಬ ಅರಿವಳಿಕೆ ಮದ್ದು ಪತ್ತೆಯಾದಾಗ ಹತ್ಯೆಯ ರಹಸ್ಯ ಹೊರಬಂತು. ಕಳೆದ ಅಕ್ಟೋಬರ್‌ನಲ್ಲಿ ಆರೋಪಿ ಮಹೇಂದ್ರನನ್ನು ಬಂಧಿಸಲಾಗಿತ್ತು.

ಡಿಜಿಟಲ್ ಸಾಕ್ಷ್ಯಗಳ ಭಂಡಾರ:

ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆಘಾತಕಾರಿ ಅಂಶಗಳಿವೆ. ಮಹೇಂದ್ರ ತನ್ನ ಪ್ರೇಯಸಿ ಹರ್ಷಿತಾ ಜೊತೆ ನಡೆಸಿದ ಸಂಭಾಷಣೆಯನ್ನು ಪತ್ತೆಹಚ್ಚಲು ಎಫ್‌ಎಸ್‌ಎಲ್ (FSL) ಸುಮಾರು 10.34 ಲಕ್ಷ ಡಿಜಿಟಲ್ ಫೈಲ್‌ಗಳನ್ನು ಪರಿಶೀಲಿಸಿದೆ. ಪೊಲೀಸರ ಕಣ್ಣು ತಪ್ಪಿಸಲು ಈತ ವಾಟ್ಸಾಪ್ ಬಿಟ್ಟು ‘PhonePe’ ಅಪ್ಲಿಕೇಶನ್ ಮೂಲಕ ಮೆಸೇಜ್ ಕಳುಹಿಸುತ್ತಿದ್ದ ಎನ್ನಲಾಗಿದೆ.

ಚಾಟ್‌ನಲ್ಲಿ ಏನಿತ್ತು?

ಒಂದು ಮೆಸೇಜ್‌ನಲ್ಲಿ ಮಹೇಂದ್ರ ತನ್ನ ಪ್ರೇಯಸಿಗೆ, “ಪೊಲೀಸರು ಕೇಳಿದರೆ ನಾವಿಬ್ಬರು ಕೇವಲ ಸ್ನೇಹಿತರು ಎಂದು ಹೇಳು” ಎಂದು ಸೂಚನೆ ನೀಡಿದ್ದ. ಅಷ್ಟೇ ಅಲ್ಲದೆ, “ನನ್ನ ಬಳಿ ಯಾವುದೇ ಸಾಕ್ಷಿಯಿಲ್ಲ, ಆದರೆ ನಾನೇ ಕೃತಿಕಾಳನ್ನು ಕೊಂದಿದ್ದೇನೆ. ನಾನು ಇನ್ನು ಮುಂದೆ ಕೊಲೆಗಾರನಂತೆಯೇ ಬದುಕುತ್ತೇನೆ” ಎಂದು ತಪ್ಪೊಪ್ಪಿಕೊಂಡಿರುವುದು ಈಗ ಸಾಬೀತಾಗಿದೆ. ಸದ್ಯ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Share

Leave a comment

Leave a Reply

Your email address will not be published. Required fields are marked *