Site icon Kannada News-suddikshana

ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರಥಮ: ತರಬೇತುದಾರ ಎಚ್. ದಾದಾಪೀರ್ ಗೆ ಎಸ್ಎಸ್ಎಂ, ಡಾ. ಪ್ರಭಾ, ಎಸ್ಪಿ ಅಭಿನಂದನೆ

SUDDIKSHANA KANNADA NEWS/ DAVANAGERE/ DATE:21-10-2024

ದಾವಣಗೆರೆ: ಗೋವಾ ರಾಜ್ಯದ ವಾಸ್ಕೋಡಿಗಾಮದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವು ಪ್ರಥಮ ಸ್ಥಾನ ಪಡೆದಿದೆ.

ದಾವಣಗೆರೆಯ ಪೊಲೀಸ್ ಇಲಾಖೆಯ ಹೆಮ್ಮೆಯ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಹೆಚ್. ದಾದಾಪೀರ್ ಅವರು ಕರ್ನಾಟಕ ರಾಜ್ಯ ತಂಡಕ್ಕೆ ತರಬೇತಿದಾರರಾಗಿದ್ದರು.

ಕರ್ನಾಟಕ ತಂಡವು ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಹೆಚ್.ದಾದಾಪೀರ್ ಅವರನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಗ್ರೂಪ್ ಆಫ್ ಐರನ್ ಗೇಮ್, ನಗರಸಭೆ ವ್ಯಾಯಾಮ ಶಾಲೆ, ಬೀರೇಶ್ವರ ವ್ಯಾಯಾಮ ಶಾಲೆಗಳ ಎಲ್ಲಾ ಹಿರಿಯ ಮತ್ತು ಕಿರಿಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

Exit mobile version