Site icon Kannada News-suddikshana

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ!

ನಿನ್ನೆ ರಾತ್ರಿ ನಗರದಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ಕಾಲು ತಾಗಿದಂತ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಕಿರಿಕ್ ಉಂಟಾಗಿ, ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದು, ಗಾಯಗೊಳಿಸಿರುವಂತ ಘಟನೆ ನಡೆದಿದೆ.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳೇ ಚಾಕುವಿನಿಂದ ಹಲ್ಲೆಗೆ ಒಳಗಾದಂತವರು.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ತೆರಳಿದ್ದಂತ ಮೂವರು ವಿದ್ಯಾರ್ಥಿಗಳು, ಡ್ಯಾನ್ಸ್ ಮಾಡುವಂತ ವೇಳೆಯಲ್ಲಿ ಕಾಲು ತಾಗಿದ್ದಕ್ಕೆ ಬೆಳಗಾವಿಯ ಚರ್ಚ್ ಗಲ್ಲಿಯ ಯುವಕರು ಕಿರಿಕ್ ತೆಗೆದಿದ್ದಾರೆ. ಇದೇ ವಿಚಾರ ತಾರಕಕ್ಕೇರಿದಾಗ ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿರುವುದಾಗಿ ತಿಳಿದು ಬಂದಿದೆ.

ಚಾಕು ಇರಿತದಿಂದ ಗಾಯಗೊಂಡಿದ್ದಂತ ಪ್ರವೀಣ್ ಗುಂಡ್ಯಾಗೋಳ ಎಂಬ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದು, ಇನ್ನಿಬ್ಬರು ದರ್ಶನ್ ಪಾಟೀಲ್, ಸತೀಶ್ ಪೂಜಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Exit mobile version