Site icon Kannada News-suddikshana

ಎಂ. ಪಿ. ರೇಣುಕಾಚಾರ್ಯಗೆ ಬಸವರಾಜ್ ಶಿವಗಂಗಾ ಪಂಥಾಹ್ವಾನ: ನಾನು ಪ್ರಮಾಣಕ್ಕೆ ಸಿದ್ಧ, ನೀನೂ ಸಿದ್ಧನಾ?

SUDDIKSHANA KANNADA NEWS/ DAVANAGERE/ DATE-26-06-2025

ದಾವಣಗೆರೆ: ಅಕ್ರಮ ಮರಳು ದಂಧೆ, ಕ್ಯಾಸಿನೋ ಪಾಲುದಾರಿಕೆ, ಐಪಿಎಲ್ ಬೆಟ್ಟಿಂಗ್, ಇಸ್ಪೀಟ್ ನಡೆಸುತ್ತಿರುವ ಕುರಿತಂತೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಯಾವುದೇ ಕೆಲಸ ಕಾನೂನು ಬಾಹಿರವಾಗಿ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ತಾಕತ್ತಿದ್ರೆ, ಧಮ್ ಇದ್ದರೆ ಚನ್ನಗಿರಿ ತಾಲೂಕಿನ ಪ್ರಸಿದ್ಧ ಮಹಾರುದ್ರಸ್ವಾಮಿ ದೇವರಲ್ಲಿ ನಾನು ತಪ್ಪು ಮಾಡಿದ್ದೇನೆ ಎಂಬುದಾಗಿ ಪ್ರಮಾಣ ಮಾಡು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಪಂಥಾಹ್ವಾನ ಕೊಟ್ಟಿದ್ದಾರೆ.

Read Also This Story: ಬಿಪಿಎಲ್ ಕಾರ್ಡ್ ಅರ್ಹತಾ ಮಾನದಂಡಗಳೇನು: ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ರೇಣುಕಾಚಾರ್ಯ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಸತ್ಯಕ್ಕೆ ದೂರವಾದದ್ದು. ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದನ್ನು ಬಿಡಬೇಕು ಎಂದು ಹೇಳಿದರು.

ಎಲ್ಲಾದರೂ ಕ್ಯಾಸಿನೋದಲ್ಲಿ ನಾನು ಶೇಕಡಾ 1ರಷ್ಟು ಪಾಲುದಾರಿಕೆ ಇದ್ದರೂ, ಇಸ್ಪೀಟ್ ನಡೆಸುತ್ತಿದ್ದೇನೆ ಎಂಬ ಕುರಿತಂತೆ, ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತಂತೆ ಎಲ್ಲಾದರೂ ದಾಖಲೆಗಳಿದ್ದರೆ, ಕೇಸ್ ದಾಖಲಾಗಿದ್ದರೆ ತೋರಿಸಲಿ. ಒಂದರಲ್ಲಿ ನಾನು ಭಾಗಿಯಾಗಿದ್ದರೂ ನಿಮ್ಮ ಮನೆಗೆ ಬಾಗಿಲಿಗೆ ಬಂದು ನಿಲ್ಲುತ್ತೇನೆ. ಆರೋಪ ಮಾಡಿದ್ದೀರಿ. ಚನ್ನಗಿರಿ ಮಹಾರುದ್ರಸ್ವಾಮಿಯಲ್ಲಿ ಪ್ರಮಾಣ ಮಾಡಿ. ಕಾನೂನು ಬಾಹಿರ ದಂಧೆಗಳಲ್ಲಿ ಭಾಗಿಯಾಗಿಲ್ಲ ಎಂದು ನಾನೂ ಸಹ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಬಹಳ ಒತ್ತಡದಲ್ಲಿ ಹೇಳಿದ್ದೀರಿ. ಸುಮ್ಮನೆ ಇದ್ದರೆ ಆಗುತಿತ್ತು. ಸುಳ್ಳು ಸತ್ಯ ಮಾಡಲು ಪ್ರಯತ್ನ ಮಾಡಿರುವ ನೀವು ಪ್ರಾಮಾಣಿಕರಾಗಿದ್ದರೆ ಮಹಾರುದ್ರಸ್ವಾಮಿ ದೇವರಲ್ಲಿ ಪ್ರಮಾಣ ಮಾಡಿ. ಇಲ್ಲ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಎಂದು ಸವಾಲು ಹಾಕಿದರು.

ಎಂ. ಪಿ. ರೇಣುಕಾಚಾರ್ಯ (M. P. Renukacharya) ಬಟ್ಟೆ ಹರಿದುಕೊಳ್ಳಬೇಕಷ್ಟೇ!

ಹೊನ್ನಾಳಿ ಏನು ಎಂಬುದು ನಮಗೂ ಗೊತ್ತಿದೆ. ಹೊನ್ನಾಳಿ ತಾಲೂಕಿನಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ನಾನು. ಯಾವ ರೀತಿ ಬೆಳೆದಿದ್ದೇನೆ ಎಂದು ಹೊನ್ನಾಳಿ ತಾಲೂಕಿನ ಜನರಿಗೆ ಕೇಳಿ ಗೊತ್ತಾಗುತ್ತೆ. ರಾಜಕೀಯ ಆರೋಪ ಮಾಡಿ. ವ್ಯಕ್ತಿಗತವಾಗಿ
ಮಾಡಬೇಡಿ. ನಾನು ಯಾವಾಗಲೂ ಯಾರ ವ್ಯಕ್ತಿಗತವಾಗಿ ಮಾತನಾಡಿಲ್ಲ. ಮರಳು ದಂಧೆ ಮಾಡಿಲ್ಲ. ಮರಳು ವ್ಯಾಪಾರ ಮಾಡಿದ್ದೇನೆ. ಸರ್ಕಾರಿ ಟೆಂಡರ್ ಪಡೆದು ಕಾನೂನು ಪ್ರಕಾರವಾಗಿಯೇ ಮರಳು ವ್ಯಾಪಾರ ಮಾಡಿದ್ದೇವೆ. ನನ್ನ ಮೊಬೈಲ್ ನಂಬರ್ ಅನ್ನು ಕೆಲವರು ಈಗಲೂ ಮರಳು ಬಸಣ್ಣ ಎಂದೇ ಸೇವ್ ಮಾಡಿಕೊಂಡಿದ್ದಾರೆ. ಮರಳು ವ್ಯಾಪಾರ ಮಾಡುವ ಸಮಯದಲ್ಲಿ ನೀವೆಲ್ಲಾ ಮಾತನಾಡಿದ್ದೀರಾ. ಎಲ್ಲೆಲ್ಲಿ ಹಣ ಪಡೆದಿದ್ದೀರಾ? ಎಂಬುದೂ ನನಗೆ
ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಎಲ್ಲಿಗೆ ಕರೆದರೂ ಯಾವುದೇ ಸಂದರ್ಭದಲ್ಲಿ ಪ್ರಮಾಣ ಮಾಡಲು ಸಿದ್ದನಿದ್ದೇನೆ. ವ್ಯಾಪಾರದ ವೇಳೆ ಯಾರ್ಯಾರ ಮನೆಗೆ ಗಂಡು ಮಕ್ಕಳು, ಹೆಣ್ಣು ಮಕ್ಕಳು ಕಳುಹಿಸಿದ್ದೀರೋ, ಹಣ ಪಡೆದಿದ್ದಿರೋ. ಎಪಿಎಂಸಿ ಕಟ್ಟೆಯಲ್ಲಿ ಕುಳಿತು ಯಾರ
ಬಗ್ಗೆ ಏನೇನೆಲ್ಲಾ ಮಾತನಾಡಿದ್ದೀರಾ ಎಂಬುದು ನನಗೆ ಗೊತ್ತಿದೆ. ನೀವು ಬಿಚ್ಚಿಡುವುದಲ್ಲ. ನಾನು ಬಿಚ್ಚಿಟ್ಟರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದರು.

Exit mobile version