Site icon Kannada News-suddikshana

ಕೆ. ಎನ್. ರಾಜಣ್ಣ ರಾಜೀನಾಮೆ ನೋಡಿದರೆ ಕಾಂಗ್ರೆಸ್ ಗುಲಾಮಗಿರಿ ಮೂರನೇ ತಲೆಮಾರಿಗೂ ಹೋಗಿಲ್ಲ: ಬಸವರಾಜ್ ಬೊಮ್ಮಾಯಿ!

ಕೆ.ಎನ್. ರಾಜಣ್ಣ

SUDDIKSHANA KANNADA NEWS/ DAVANAGERE/DATE:11_08_2025

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸತ್ಯಕ್ಕೆ ಸ್ಥಳವಿಲ್ಲ. ಸತ್ಯ ಹೇಳುವವರಿಗೂ ಸ್ಥಳವಿಲ್ಲ. ಕಾಂಗ್ರೆಸ್ ನ ಮತಕ್ಕೆ ಓಲೈಕೆ ರಾಜಕಾರಣದ ಜೊತೆಗೆ ಆಂತರಿಕವಾಗಿ ಸಂವಿಧಾನದ ವಿರೋಧ ನಡೆದರೂ ಹೈಕಮಾಂಡ್ ವಿರುದ್ದ ಧ್ವನಿ ಎತ್ತುವ ಸ್ವತಂತ್ರ ಇಲ್ಲ‌. ಗುಲಾಮರಂತೆ ನಡೆಸಿಕೊಳ್ಳುವ ಮನಸ್ಥಿತಿ ಮೂರನೇ ತಲೆಮಾರಿನ ಕಾಂಗ್ರೆಸ್ ನಾಯಕರಿಗೆ ಇನ್ನೂ ಹೋಗಿಲ್ಲ ಎಂಬುದಕ್ಕೆ ಕೆ. ಎನ್. ರಾಜಣ್ಣರ ರಾಜೀನಾಮೆ ಉತ್ತಮ ನಿದರ್ಶನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

READ ALSO THIS STORY: HDFC, SBI ಸೇರಿ 11 ಬ್ಯಾಂಕ್ ಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ

ಈ ಕುರಿತು ಎಕ್ಸ್ ಮಾಡಿರುವ ಅವರು, ಕೆ.ಎನ್ . ರಾಜಣ್ಣ ಒಬ್ಬ ಹಿರಿಯ ಅನುಭವಿ ರಾಜಕಾರಣಿ. ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದರು. ಎಸ್ಟಿ ಸಮುದಾಯದ ಹಿರಿಯ ನಾಯಕ ಅವರಿಗೆ ರಾಜಿನಾಮೆ ಕೊಡಲು ಅವಕಾಶ ಕೊಡದಿರುವುದು ಅವರ ಅನುಭವ, ದಕ್ಷತೆ, ಎಸ್ಟಿ ಜನಾಂಗಕ್ಕೆ ಮಾಡಿರುವ ಅವಮಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ರೀತಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ಗಂಟೆ. ಇದರಿಂದ ರಾಜಣ್ಣ ಹೇಳಿದಂತೆ ಕಾಂಗ್ರೆಸ್ ನಲ್ಲಿ ಕ್ರಾಂತಿ ಪ್ರಾರಂಭ ಆಗಿದೆ. ಏನೇ ಆದರೂ ಮತ ಸೇರ್ಪಡೆ ಕಾಂಗ್ರೆಸ್ ಆಡಳಿತದಲ್ಲಿ ಆಗಿದೆ ಎನ್ನುವುದು ಕಟು ಸತ್ಯ. ಅದನ್ನು ಅಳಿಸಲು ಸಾಧ್ಯವಿಲ್ಲ. ಸತ್ಯದ ಕನ್ನಡಿಯಂತೆ ರಾಹುಲ್ ಗಾಂಧಿಗೆ ಹೇಳಿರುವುದಕ್ಕೆ ರಾಜಣ್ಣ ಅವರನ್ನು ಮೆಚ್ಚಬೇಕು. ಆದರೆ ಪ್ರಾಮಾಣಿಕರಿಗೆ ಕಾಂಗ್ರೆಸ್ ನಲ್ಲಿ ಸ್ಥಳ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

Exit mobile version