Site icon Kannada News-suddikshana

ಬಾಂಗ್ಲಾದೇಶದ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ, ‘ಸೇನೆ’ಗೆ ಅಧಿಕಾರ ಹಸ್ತಾಂತರ

ಢಾಕಾ : ಬಾಂಗ್ಲಾದೇಶದ ಅವಾಮಿ ಲೀಗ್ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಧ್ಯ ಬಾಂಗ್ಲಾ ಸೇನೆಗೆ ಅಧಿಕಾರ ಹಸ್ತಾಂತರಿಸಲಾಗಿದೆ.

ಸೇನೆಯು ಮಧ್ಯಂತರ ಸರ್ಕಾರವನ್ನ ರಚಿಸಲಿದೆ ಮತ್ತು ಶಾಂತಿಯ ಹಾದಿಗೆ ಮರಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದೆ ಎಂದು ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಜಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಸ್ತುತ ಅಧಿಕಾರಾವಧಿ 2009 ರಲ್ಲಿ ಪ್ರಾರಂಭವಾಗಿದ್ದು, ಎರಡು ಬಾರಿ ಪ್ರಧಾನಿಯಾಗಿರುವ ಅವರು ಮಿಲಿಟರಿ ಹೆಲಿಕಾಪ್ಟರ್ನಲ್ಲಿ ರಾಜ್ಯದ ರಾಜಧಾನಿ ಢಾಕಾದಿಂದ ಹೊರಟಿದ್ದಾರೆ ಮತ್ತು ಭಾರತದ ಸುರಕ್ಷಿತ ಸ್ಥಳಕ್ಕೆ ತೆರಳಬಹುದು ಎಂದು ವರದಿಯಾಗಿದೆ.

Exit mobile version