Site icon Kannada News-suddikshana

ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ: ಮೇಘಾಲಯಕ್ಕೆ ಆಗಮಿಸಿದ 284 ನಾಗರಿಕರು

ನವದೆಹಲಿ: ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಮಧ್ಯೆ ಭಾರತ, ನೇಪಾಳ ಮತ್ತು ಕೆನಡಾದ 284 ನಾಗರಿಕರು ಮೇಘಾಲಯಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದ್ವಾಕಿ ಇಂಟಿಗ್ರೇಟೆಡ್ ಚೆಕ್‌ಪೋಸ್ಟ್ ಮೂಲಕ ಮೇಘಾಲಯಕ್ಕೆ ಆಗಮಿಸಿದ್ದಾರೆ. ಮೇಘಾಲಯಕ್ಕೆ ಆಗಮಿಸಿದವರ ಪೈಕಿ 168 ಮಂದಿ ನೇಪಾಳಿಗರು, 115 ಮಂದಿ ಭಾರತೀಯರು ಮತ್ತು ಒಬ್ಬ ಕೆನಡಾ ಪ್ರಜೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ 3 ದಿನಗಳಲ್ಲಿ ಭಾರತ, ಭೂತಾನ್ ಮತ್ತ ನೇಪಾಳ, ಕೆನಾಡದಿಂದ ಒಟ್ಟು 953 ನಾಗರಿಕರು ದಾಕಿ ಚೆಕ್‌ಪೋಸ್ಟ್ ಮೂಲಕ ಮೇಘಾಲಯಕ್ಕೆ ಬಂದಿದ್ದಾರೆ. ಇಂದಿರಾ ನಡುವೆ ಬಾಂಗ್ಲಾದಲ್ಲಿ ಸಿಲುಕಿದ್ದ ಸುಮಾರು 800 ನೇಪಾಳಿ ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version