ಬೆಂಗಳೂರು: ದಿನ ಬೆಳಗಾದ್ರೆ ಈ ಜ್ಯೋತಿಷಿ ಕಮಲಾಕರ್ ಭಟ್ ಕನ್ನಡದ ಖ್ಯಾತ ಸುದ್ದಿವಾಹಿನಿಯಲ್ಲಿ ಪುಂಗುತ್ತಿದ್ದ. ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಪುಸಲಾಯಿಸುತ್ತಿದ್ದ. ಕಷ್ಟಕ್ಕೆ ಪರಿಹಾರ ಹೇಳುವ ನೆಪದಲ್ಲಿ ಮಂಚಕ್ಕೆ ಮಹಿಳೆಯರನ್ನು ಪರೋಕ್ಷವಾಗಿ ಕರೆಯುತ್ತಿದ್ದ ಎಂಬ ಆರೋಪ ಈ ಜ್ಯೋತಿಷಿ ಮೇಲೆ ಕೇಳಿ ಬಂದಿದೆ. ಒಬ್ಬಾಕೆಯ ಬಲೆಯಲ್ಲಿ ಬೀಳಿಸಿಕೊಂಡಿದ್ದ ಕಮಲಾಕರ್ ಭಟ್ ಮಹಿಳೆಯೊಬ್ಬಳ ಸಂಗಕ್ಕೆ ಬಿದ್ದು ತನ್ನ ಜ್ಯೋತಿಷ್ಯದ ಕಪಟ ನಾಟಕ ಬಯಲು ಮಾಡಿಕೊಂಡಿದ್ದಾನೆ.
ಮಹಿಳೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಮೇಲೆ ನಂಬಿಕೆ ಇಟ್ಟಿದ್ದ ಪತಿಗೆ ಮೋಸ ಮಾಡಿದ್ದಾಳೆ ಈ ರಂಗಿನಾಟದ ಮಹಿಳೆ.
ಖಾಸಗಿ ವಾಹಿನಿಯಲ್ಲಿ ಕುಳಿತುಕೊಂಡು ಪುಂಗ್ತಿದ್ದೇ ಪುಂಗ್ತಿದ್ದು. ನೀವು ಹೀಗಿರಬೇಕು. ಹಾಗಿರಬೇಕು. ಹೀಗಿದ್ರೆ ಹಾಗೆ ಆಗುತ್ತೆ.. ಹಾಗಿದ್ರೆ ಹೀಗೆ ಆಗುತ್ತೆ.. ಆ ಪೂಜೆ ಮಾಡಿ.. ಈ ಪೂಜೆ ಮಾಡಿ ಅಂತ ದೇವರ ಹೆಸ್ರಲ್ಲಿ ಜನರ ದಾರಿ ತಪ್ಪಿಸ್ತಿದ್ದ. ಆದ್ರೆ, ತಾನು ಮಾತ್ರ ಅಕ್ರಮದ ಹಾದಿಯಲ್ಲಿದ್ದ ಎಂಬುದು ಈಗ ಗೊತ್ತಾಗಿದೆ.
ಮಕ್ಕಳಿದ್ದರೂ ಜ್ಯೋತಿಷಿ ಜೊತೆ ಆಟ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸುಚಿತ್ರಾಗೆ ಮದುವೆಯಾಗಿ ಎರುಡು ಮಕ್ಕಳಿದ್ವು.ಗಂಡ ಮಹೇಶ್ ನಾಯ್ಕ್, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಈಕೆ ಮಾತ್ರ ಜ್ಯೋತಿಷಿ ಕಮಲಾಕರ ಭಟ್ ತೆಕ್ಕೆಯಲ್ಲಿ ನಿತ್ಯ ತೇಲಾಡ್ತಿದ್ದಳು. ನಿತ್ಯ ಪೂಜೆ ನೆಪದಲ್ಲಿ ಸುಚಿತ್ರಾ ಮನೆಗೆ ಬರ್ತಿದ್ದ ಕಮಲಾಕರ್ ಭಟ್ ನಿತ್ಯವೂ ಪೂಜೆಯಲ್ಲಿ ತೊಡಗಿಕೊಳ್ತಿದ್ದ. ಇದರಿಂದ ಸುಚಿತ್ರಾ ಮೊದಲ ಮಗಳಿಗೆ ಇರಿಸು ಮುರಿಸು ಆಗ್ತಿತ್ತು. ಹೀಗಾಗಿ ಹಲವು ಬಾರಿ ತನ್ನ ಅಮ್ಮನ ಜೊತೆ ಜಗಳ ಕೂಡ ಮಾಡಿದ್ದಳು ಎನ್ನಲಾಗಿದೆ.
ಹಿರಿಯ ಮಗಳಿಗೆ ಕಿರಿಕಿರಿ:
ಆದ್ರೆ ತನ್ನ ವರ್ತನೆ ಬದಲು ಮಾಡಿಕೊಂಡಿರಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಹಿರಿಯ ಮಗಳು ಈ ವಿಚಾರವನ್ನ ತನ್ನ ತಂದೆಗೆ ತಿಳಿಸಿದ್ದಳು. ಊರಿಗೆ ಬಂದ ಗಂಡ ಮಹೇಶ್, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಇದ್ರಿಂದ ಕೆರಳಿದ್ದ ಸುಚಿತ್ರಾ, ತನ್ನ ತಂದೆ ಲೋಕನಾಥ್ ಮತ್ತು ಸಹಚರರು ಮಹೇಶ್ ನಾಯ್ಕ್ ಹಾಗೂ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಚಿತ್ರಾ, ಗುರೂಜಿ ಸಿದ್ದಾಪುರದಲ್ಲಿ ಬಂಧನ:
ಕೊಲೆ ಬಳಿಕ ಎಸ್ಕೇಪ್ ಆಗಲು ಯತ್ನಿಸಿದ ಜೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಸೇರಿ ನಾಲ್ವರನ್ನು ಸಿದ್ದಾಪುರದಲ್ಲಿ ಬಂಧಿಸಲಾಗಿದ್ದರೆ. ಶಿವಮೊಗ್ಗದಲ್ಲಿ ಉಳಿದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ದೇವರ ಹೆಸ್ರೇಳುತ್ತಲೇ ಅನಾಚಾರ ಮಾಡ್ತಿದ್ದ ಕಮಲಾಕರ್ ಭಟ್ ಈಗ ಜೈಲು ಸೇರಿದ್ದಾನೆ.





Leave a comment