Site icon Kannada News-suddikshana

ಬೆಂಗಳೂರು: ಕೋರ್ಟ್‌ಗೆ ಇಂದು ರಾಹುಲ್‌ ಗಾಂಧಿ ಹಾಜರು

ಬೆಂಗಳೂರು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಶುಕ್ರ ವಾರ ಬೆಂಗಳೂರಿಗೆ ಆಗಮಿಸಿ, “ಶೇ. 40 ಕಮಿಷನ್‌ ಸರಕಾರ’ ಜಾಹೀರಾತು ನೀಡಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಸಿಟಿ ಸಿವಿಲ್‌ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ. ಪ್ರಕರಣದಲ್ಲಿ ಅವರು 4ನೇ ಆರೋಪಿ.

2023ರ ಮೇ 5ರಂದು ಆಗ ಅಧಿ ಕಾರದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್‌ ವಿವಿಧ ಪತ್ರಿಕೆ ಗಳಲ್ಲಿ ಜಾಹೀರಾತು ನೀಡಿ, “ಆಡಳಿತಾರೂಢ ರಾಜ್ಯ ಬಿಜೆಪಿ ಸರಕಾರ ಶೇ. 40ರಷ್ಟು ಕಮಿಷನ್‌ ಸರಕಾರ’ ಎಂದು  ಆರೋಪಿಸಿತ್ತು. ಈ ಬಗ್ಗೆ ಬಿಜೆಪಿ ಮುಖಂಡ ಬಿ.ಎಸ್‌. ಕೇಶವ ಪ್ರಸಾದ್‌ ಖಾಸಗಿ ದೂರು ಸಲ್ಲಿಸಿದ್ದರು. ಅದನ್ನು “ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾ ಲಯ’ದ 42ನೇ ಎಸಿಎಂಎಂ ಕೋರ್ಟ್‌ ವಿಚಾರಣೆಗೆ ಅಂಗೀ ಕರಿಸಿ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು.

ಅದರಂತೆ ಸಿಎಂ-ಡಿಸಿಎಂ ಜೂ. 1ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಗೈರಾಗಿದ್ದ ರಾಹುಲ್‌ಗೆ  ಜೂ. 7ರಂದು ಖುದ್ದು ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹಾಜರಾಗಲಿದ್ದಾರೆ.

 

Exit mobile version