Site icon Kannada News-suddikshana

Bangalore: ಕಳೆದ 5 ವರ್ಷಗಳಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸೇರ್ಪಡೆಗೊಂಡಿಲ್ಲ… ರಾಜ್ಯದ ಪಾಲಾದ ವಿದ್ಯುತ್ ನವದೆಹಲಿಗೆ ಹಂಚಿಕೆ!

CM MEETING IN BANGALORE

CM MEETING IN BANGALORE

SUDDIKSHANA KANNADA NEWS/ DAVANAGERE/ DATE:13-10-2023

ಬೆಂಗಳೂರು (Bangalore): ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ವಿದ್ಯುತ್‌ ವ್ಯವಸ್ಥೆಯನ್ನು ರಚಿಸಲು ದೀರ್ಘಾವಧಿಯ ಅವಶ್ಯಕತೆಯಿರುವುದರಿಂದ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಬೇಕಾಗಿದೆ. ನವೀಕರಿಸಬಹುದಾದ ಇಂಧನದಲ್ಲಿ ಖಾಸಗಿ ವಲಯದಲ್ಲಿ ಸಹ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳು ಆಗಿಲ್ಲ. ಛತ್ತೀಸ್‌ಗಢ ಪಿಟ್ ಹೆಡ್ ಪವರ್ ಪ್ಲಾಂಟ್ – ಯಾವುದೇ ಪ್ರಗತಿಯನ್ನು ಮಾಡಲಾಗಿಲ್ಲ. ಒರಿಸ್ಸಾದಲ್ಲಿರುವ ಮಂದಾಕಿನಿ Captive ಗಣಿಯಿಂದ ಕಲ್ಲಿದ್ದಲು ಪಡೆಯಲು ಯಾವುದೇ ಅನುಸರಣೆಯಾಗಿಲ್ಲ. KUSUM Cಅಡಿಯಲ್ಲಿ ಸೌರ ವಿಕೇಂದ್ರೀಕೃತ ಸ್ಥಾವರವನ್ನು 3,37,508 ಪಂಪ್‌ಸೆಟ್‌ಗಳಿಗೆ ಮಂಜೂರು ಮಾಡಲಾಗಿದೆ. ಆದರೆ ಅನುಷ್ಠಾನವಾಗಿರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Read Also This Story:

ಸುರಂಗಗಳಲ್ಲಿ ಅಡಗಿ ಕೂತಿರುವ ಹಮಾಸ್ ಉಗ್ರರು: ಉತ್ತರ ಗಾಜಾ ಪ್ರದೇಶದ 1.1 ಮಿಲಿಯನ್ ಜನರ ಸ್ಥಳಾಂತರಕ್ಕೆ ಇಸ್ರೇಲ್ (Israel)ಮಿಲಿಟರಿ ಸೂಚನೆ..?

2020-21 ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದ 7000 ಸಂಖ್ಯೆಯ off grid/Stand-alone ಸೌರ ಪಂಪ್‌ ಗಳ ಅಳವಡಿಕೆಯಾಗಿರುವುದಿಲ್ಲ. ಇತರೆ ರಾಜ್ಯಗಳಿಗೆ 1 ಲಕ್ಷ ಪಂಪ್‌ ಗಳ ಹಂಚಿಕೆಯಾಗಿದೆ. ರಾಜ್ಯದ ಪಾಲಾದ 150 MW ವಿದ್ಯುತ್ತನ್ನು ನವದೆಹಲಿಗೆ ಹಂಚಿಕೆ ಮಾಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ 40-50% ಹೆಚ್ಚಾಗಿದೆ. ಮಳೆಯ ಕೊರತೆಯುಂಟಾಗಿದೆ. ಕೃಷಿ ಪಂಪ್‌ ಸೆಟ್‌ ಗಳ ಹೆಚ್ಚಿನ ವಿದ್ಯುತ್‌ ಬೇಡಿಕೆ ಇದ್ದು, ಆರ್ಥಿಕತೆಯಲ್ಲಿ ಕೋವಿಡ್ ನಂತರದ ಪ್ರಬಲ ಚೇತರಿಕೆ ಆಗಿದೆ.

ದೈನಂದಿನ ಬಳಕೆಯು 180 ಮಿಲಿಯನ್‌ ಯೂನಿಟ್‌ ನಿಂದ 260 ಮಿಲಿಯನ್‌ ಯೂನಿಟ್‌ ಗಳಿಗೆ ಏರಿಕೆಯಾಗಿದೆ. ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11000MW ನಿಂದ 16000MW ಗೆ ಏರಿಕೆಯಾಗಿದೆ (ಮಳೆಗಾಲದಲ್ಲಿ). ಜಲವಿದ್ಯುತ್ ಮತ್ತು
ಪವನ ವಿದ್ಯುತ್‌ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10,000MW ವಿದ್ಯುತ್‌ ಕೊರತೆ ಎದುರಿಸಲಾಗುತ್ತಿದೆ. ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆಯಿರುತ್ತದೆ – ಅದರ ಹೊರತಾಗಿಯೂ
ರಾಜ್ಯದಿಂದ 1000 ರಿಂದ 1500MW ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ. ಜಲವಿದ್ಯುತ್‌ ಲಭ್ಯತೆಯಲ್ಲಿ 3000 MU ರಷ್ಟು ಕಡಿಮೆಯಾಗಿದೆ – ಪ್ರತಿ ದಿನಕ್ಕೆ ಸರಾಸರಿ 10MUs. ಜಲವಿದ್ಯುತ್ತನ್ನು ಗರಿಷ್ಠ ಬೇಡಿಕೆ ಪೂರೈಸಲು ಮತ್ತು ವಿದ್ಯುತ್‌ ಜಾಲದ ನಿರ್ವಹಣೆಗಾಗಿ ಮಾತ್ರ ಬಳಸಲಾಗುತ್ತಿದೆ.

ಶಾಖೋತ್ಪನ್ನ ಘಟಕಗಳು: 

 

 

ವಿನಿಮಯ / ದ್ವಿಪಕ್ಷೀಯ ವಿನಿಮಯದಿಂದ ವಿದ್ಯುತ್ತನ್ನು ಪಡೆಯುವುದು:

 

ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬಲವರ್ಧನೆ:

ವಿದ್ಯುತ್ ಸರಬರಾಜು / ವಿದ್ಯುತ್‌ ವಿತರಣೆಯ ಮೇಲ್ವಿಚಾರಣೆ:

 

Exit mobile version