SUDDIKSHANA KANNADA NEWS/ DAVANAGERE/ DATE:18-09-2023
ಬೆಂಗಳೂರು (Bangalore): ಬೈಂದೂರು ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಿಂದೂ ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮಾಡಿರುವ ಆಸ್ತಿ ಒಂದೊಂದೇ ಬೆಳಕಿಗೆ ಬರುತ್ತಿದೆ. ಜೊತೆಗೆ ಉತ್ತರ ಕರ್ನಾಟಕ ಮೂಲದ ಕೆಲವರಿಗೂ ಪಂಗಾನಾಮ ಹಾಕಿರುವ ಕುರಿತಂತೆಯೂ ತನಿಖೆ ಚುರುಕುಗೊಳ್ಳುತ್ತಿದೆ. ಈ ಬೆಳವಣಿಗೆ ನಡುವೆ ಉದ್ಯಮಿ ಗೋವಿಂದ ಪೂಜಾರಿ ಅಲಿಯಾಸ್ ಗೋವಿಂದ ಬಾಬು ಪೂಜಾರಿ ಅವರನ್ನು Bangalore ಸಿಸಿಬಿ ವಿಚಾರಣೆಗೆ ಕರೆದಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಈ ಸುದ್ದಿಯನ್ನೂ ಓದಿ:
ಕೋಟ್ಯಂತರ ರೂ. ಒಡತಿ ಚೈತ್ರಾ ಕುಂದಾಪುರ (Kundapur) ಬಗ್ಗೆ ನಿಮಗೆಷ್ಟು ಗೊತ್ತು…? ಗೋವಿಂದ ಪೂಜಾರಿ ಹಿನ್ನೆಲೆ ಏನು..? ಕೇವಲ 9 ವರ್ಷಗಳಲ್ಲಿ ಬೆಳೆದಿದ್ದು, ಹಣ ಮಾಡಿದ್ದೇ ರೋಚಕ
ಚೈತ್ರಾ ಕುಂದಾಪುರ ಸೇರಿದಂತೆ ಏಳಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಸಿಸಿಬಿ ಬಂಧಿಸಿ, ವಿಚಾರಣೆ ಮುಂದುವರಿಸಿದೆ. ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಹಾಗೂ ಮಾಹಿತಿ ನೀಡುವಂತೆ ಗೋವಿಂದ ಪೂಜಾರಿಗೆ ಬುಲಾವ್ ಕೊಟ್ಟಿದ್ದಾರೆ.
ದೂರುದಾರ ಗೋವಿಂದ ಬಾಬು ಪೂಜಾರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ. ಸಿಸಿಬಿ ಪೊಲೀಸರು ಗೋವಿಂದ ಬಾಬು ಬಳಿ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಒಂದು ಪಕ್ಷ ಹಣದ ಮೂಲವನ್ನು
ತಿಳಿಸದಿದ್ರೆ ಗೋವಿಂದ ಬಾಬು ಪೂಜಾರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಈಗಾಗಲೇ ಹಣ ವಹಿವಾಟು ನಡೆದಿರುವ ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಗೋವಿಂದ ಪೂಜಾರಿ ಸೇರಿ ಹಲವೆಡೆ ಸ್ಥಳ ಮಹಜರು ನಡೆದಿದ್ದು, ವಿಜಯನಗರ ನಿವಾಸ,
ಕೆಕೆ ಪ್ರವಾಸಿ ಮಂದಿರ ಸೇರಿದಂತೆ ಹಲವೆಡೆ ಸ್ಥಳ ಮಹಜರು ಮಾಡಿ ಮಾಹಿತಿ ಕಲೆ ಹಾಕುವ ಕೆಲಸ ಮುಂದುವರಿದಿದೆ.
ಐದು ಕೋಟಿ ಮೂಲದ ಹುಡುಕಾಟದಲ್ಲಿ ಸಿಸಿಬಿ ಇದೆ. ಮತ್ತೊಂದೆಡೆ ಅಭಿನವ ಹಾಲಶ್ರೀ ಇನ್ನೂ ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನಿಗೂ ಶ್ರೀಗಳು ಅರ್ಜಿ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಚೈತ್ರಾ ಒಡೆತನದ ಕಾರು
ಪತ್ತೆಯಾಗಿದೆ. ಚೈತ್ರಾ ಕುಂದಾಪುರ ಗೆಳೆಯ ಶ್ರೀಕಾಂತ್ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಮತ್ತೊಂದೆಡೆ ಚೈತ್ರಾ ಕುಂದಾಪುರ ಎಲ್ಲೆಲ್ಲಿ ಹಣದ ವಹಿವಾಟು, ಆಸ್ತಿ, ಚಿನ್ನಾಭರಣ, ಅಕ್ಕನಿಗೆ ನೆರವು ನೀಡಿದ್ದು ಸೇರಿದಂತೆ
ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ. ಈ ನಡುವೆ ಹಣದ ವಹಿವಾಟಿನ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ಚೈತ್ರಾ ಕುಂದಾಪುರ ಬರೆದಿದ್ದಾರೆನ್ನಲಾದ ಚೈತ್ರಾ ಕುಂದಾಪುರ ಹೆಸರಿರುವ ಪತ್ರವೊಂದು ಸಹ ವೈರಲ್ ಆಗಿದೆ.
ಒಟ್ಟಿನಲ್ಲಿ ಚೈತ್ರಾ ಕುಂದಾಪುರ, ಗೋವಿಂದ ಪೂಜಾರಿ ನಡುವಿನ ಫೈಟ್ ತಾರಕಕ್ಕೇರುತ್ತಿದ್ದು, ಪೂಜಾರಿ ವಿರುದ್ಧ ಅಕ್ರಮ ಹಣ ಸಂಪಾದನೆ, ವರ್ಗಾವಣೆ ಆರೋಪ ಕೇಳಿ ಬಂದಿದ್ದರೆ, ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ವಿರುದ್ಧ ಕೋಟ್ಯಂತರ
ರೂಪಾಯಿ ವಂಚಿಸಿದ ಆರೋಪದಲ್ಲಿ ಸಿಲುಕಿದೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಚಾಟ ಮುಂದುವರಿದಿದೆ.