Site icon Kannada News-suddikshana

Bangalore: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಕಲೆಕ್ಷನ್ ಮಾಸ್ಟರ್ಸ್, ರಾಜ್ಯದ ಹಣ ಲೂಟಿ ಮಾಡಿ ಹೈಕಮಾಂಡ್ ಗೆ ಸಂದಾಯ: ಬಿಜೆಪಿ ಟ್ವೀಟ್ ನಲ್ಲಿ ಆರೋಪ

SUDDIKSHANA KANNADA NEWS/ DAVANAGERE/ DATE:20-10-2023

ಬೆಂಗಳೂರು (Bangalore): ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಕಲೆಕ್ಷನ್ ಮಾಸ್ಟರ್ಸ್ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಕರ್ನಾಟಕದ ಜನತೆಯ ಶ್ರಮದ ದುಡಿಮೆಯ ಹಣವನ್ನು ವಲಯವಾರು ಲೂಟಿ ಮಾಡಿ, ಹೈಕಮಾಂಡ್‌‌ಗೆ ತಲುಪಿಸುತ್ತಿರುವ ಕಲೆಕ್ಷನ್‌ ಮಾಸ್ಟರ್‌ಗಳು ಎಂದು ಟ್ವೀಟ್ ಮಾಡಿದೆ.

ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ. ಸಿ. ವೇಣುಗೋಪಾಲ್‌ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ. ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಕಲೆಕ್ಷನ್ ಹಾವಳಿಗೆ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನ ತತ್ತರಿಸಿದ್ದಾರೆ. ಅಗತ್ಯ ಸೌಕರ್ಯಗಳಿಗೂ ಕೈ ಬಿಸಿ ಮಾಡಬೇಕಾದ ಕಾರಣ ಮಹಿಳೆಯರಂತೂ ಬೇಸತ್ತಿದ್ದಾರೆ. ಸ್ಟಾಲಿನ್ ಜತೆಗಿನ ಹೊಂದಾಣಿಕೆಗಾಗಿ ಬರದಲ್ಲೂ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮನೆಗಳಿಗೆ ನೀರು ಬಿಡಲು ಮಾತ್ರ ಲಂಚ ಕೊಡಲೇಬೇಕು. ಮೇಲಿನಿಂದ ಕೆಳ ಹಂತದವರೆಗೂ ಸರ್ಕಾರಿ ವ್ಯವಸ್ಥೆಯೇ ಲಂಚಕ್ಕಾಗಿ ಹಾತೊರೆಯಲು, ಸರ್ಕಾರ ನಡೆಸುವ  ಕಲೆಕ್ಷನ್  ಮಾಸ್ಟರ್‌ಗಳೇ ಸ್ಫೂರ್ತಿ ಎಂದು ಬಿಜೆಪಿ ಟ್ವೀಟ್ ನಲ್ಲಿ ಹೇಳಿದೆ.

Read Also This Story:

Channagiri: ಕಾಂಗ್ರೆಸ್ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡನ ರೋಷಾವೇಶ, ಕೆಲ್ಸ ಮಾಡದಿದ್ದರೆ ರಾಜೀನಾಮೆ ಕೊಡು, 5 ಸಾವಿರ ಮತ ಪಡೆ ನೋಡೋಣ: ಶಿವಗಂಗಾ ಬಸವರಾಜ್ ಗೆ ಹೊದಿಗೆರೆ ರಮೇಶ್ ಸವಾಲು

ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್‌ ಕಾರ್ಡ್:

ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್‌ ಮಾಸ್ಟರ್ಸ್‌ಗಳಾದ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್‌ ಆಗುವ ಸಾಧ್ಯತೆ ಇದೆಯಂತೆ..! ಎಂದು ಟ್ವೀಟ್ ನಲ್ಲಿ
ಹೇಳಿದೆ.

ರಾಜ್ಯದಲ್ಲಿ #ATMSarkara ಬಂದ ಮೇಲೆ ಇಲಾಖೆಗಳನ್ನು ಭ್ರಷ್ಟಾಚಾರದ ಹಾಟ್‌ಸ್ಪಾಟ್‌ಗಳನ್ನಾಗಿ ಮಾಡಿ ಅಧಿಕಾರಿಗಳನ್ನು ಮಿನಿ ಏಜೆಂಟ್‌ಗಳನ್ನಾಗಿಸಿ ಲಂಚದ ಟಾರ್ಗೆಟ್‌ ಕೊಟ್ಟಿದೆ:

ಲಂಚದ ದುಡ್ಡು ಮಂಚದ ಕೆಳಗೆ ಸಿಕ್ಕ ಮೇಲೆ ಸಿದ್ದರಾಮಯ್ಯ ಅವರ ಸರ್ಕಾರ ₹1000 ಕೋಟಿ ಹೊಂದಿಸಲು ಲಂಚಕ್ಕೆ ಹೊಸ ಲೈಸೆನ್ಸ್‌ ಕೊಟ್ಟಿದೆ..! ಎಂದು ಬಿಜೆಪಿಯು ಟ್ವೀಟ್ ನಲ್ಲಿ ಆರೋಪ ಮಾಡಿದೆ.

Exit mobile version