Site icon Kannada News-suddikshana

ಪರಶುರಾಮ ಥೀಮ್ ಪಾರ್ಕ್ ಹಗರಣ: ಬೆಂಗಳೂರಿನ ಗೋಡೌನ್‌ನಲ್ಲಿ ಮಹಜರು ನಡೆಸಿದ ಕಾರ್ಕಳ ಪೊಲೀಸರು

ಬೆಂಗಳೂರು: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಬೆಂಗಳೂರಿನ ಗೋಡೌನ್‌ನಲ್ಲಿ ಶನಿವಾರ ಸ್ಥಳ ಮಹಜರು ನಡೆಸಿದ್ದಾರೆ.

ಕಾರ್ಕಳ ಟೌನ್ ಠಾಣೆ ಪೊಲೀಸರ ತಂಡ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳಮಹಜರು ಮಾಡಿದ್ದಾರೆ. ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸಂಗ್ರಹಿಸಿದ್ದ ಪ್ರತಿಮೆಗೆ ಬೇಕಾದ ವಸ್ತುಗಳು ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಕಾರ್ಕಳದಲ್ಲಿ ನಿರ್ಮಾಣವಾಗಿದ್ದ ಪರಶುರಾಮ ಮೂರ್ತಿಯ ಕುರಿತು ವಿವಾದ ಕೇಳಿ ಬಂದ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ಕಾರ್ಕಳ ಟೌನ್ ಪೊಲೀಸರು ಇದೀಗ ಬೆಂಗಳೂರಿನ ಗೋಡೌನ್ ಒಂದರಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

Exit mobile version