Home ದಾವಣಗೆರೆ ಬನಶಂಕರಿ ದೇವಿ ಪ್ರಥಮ ಬ್ರಹ್ಮ ರಥೋತ್ಸವ: 13ನೇ ವರ್ಷದ ಬನದ ಹುಣ್ಣಿಮೆ ಆಚರಣೆ
ದಾವಣಗೆರೆನವದೆಹಲಿಬೆಂಗಳೂರು

ಬನಶಂಕರಿ ದೇವಿ ಪ್ರಥಮ ಬ್ರಹ್ಮ ರಥೋತ್ಸವ: 13ನೇ ವರ್ಷದ ಬನದ ಹುಣ್ಣಿಮೆ ಆಚರಣೆ

Share
Share

SUDDIKSHANA KANNADA NEWS/DAVANAGERE/DATE:28_12_2025

ದಾವಣಗೆರೆ: ನಗರದ ಡಿಸಿಎಂ ಟೌನ್‌ಶಿಪ್ ಹಿಂಭಾಗದಲ್ಲಿ ಇರುವ ರಾಜೇಂದ್ರ ಬಡಾವಣೆಯ ಶ್ರೀಬನಶಂಕರಿ ದೇವಸ್ಥಾನದಲ್ಲಿ ಹಂಪಿ ಹೇಮಕೂಟದ ಶ್ರೀಗಾಯತ್ರಿ ಮಹಾಪೀಠದ ದಯಾನಂದಪುರಿ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ 13ನೇ ವರ್ಷದ ಬನದ ಹುಣ್ಣಿಮೆಯ ಪ್ರಯುಕ್ತ ಜನವರಿ 1ರಿಂದ 3ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರಥಮ ಬ್ರಹ್ಮ ರಥೋತ್ಸವ ಆಚರಿಸಲಾಗುತ್ತಿದೆ.

ಜನವರಿ 1ರ ಗುರುವಾರ ಬೆಳಿಗ್ಗೆ 6ಗಂಟೆಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಕುಂಬಾಭಿಷೇಕ, ಗಂಗಾಪೂಜೆ, ಮಹಿಳೆಯರಿಂದ 101 ಕುಂಭಗಳ ಮೆರವಣಿಗೆ ಮತ್ತು ಧರ್ಮ ಧ್ವಜಾರೋಹಣ. 2ರ ಶುಕ್ರವಾರ ಬೆಳಿಗ್ಗೆ 6ರಿಂದ 11ರವರೆಗೆ ಶಾಖಾಂಬರಿ ಅಲಂಕಾರ ಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ, ನವಗ್ರಹ ಶಾಂತಿ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು. ನಂತರ ನೂತನ ರಥಕ್ಕೆ ಸ್ವರ್ಣಪೂರಕ ಪಂಚಗವ್ಯ ಶಾಂತಿ ಹಾಗೂ ಕುಂಭ ಲಗ್ನದಲ್ಲಿ ಕಳಶಾರೋಹಣ.

3ರ ಶನಿವಾರ ಬೆಳಿಗ್ಗೆ 6ಕ್ಕೆ ಕ್ಷೀರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ. ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ. ಸಂಜೆ 3ರಿಂದ ಸಭಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ಬ್ರಹ್ಮ ರಥೋತ್ಸವ. ಸಾನ್ನಿಧ್ಯವನ್ನು ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಶ್ರೀಬನಶಂಕರಿ ದೇವಸ್ಥಾನ ಸಮಿತಿ, ದೇವಾಂಗ ಸಮಾಜದ ಅಧ್ಯಕ್ಷ ಡಾ.ಎಸ್.ರಂಗನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ದೇವಾಂಗ ಸಮಾಜದ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಡಾ.ಎ.ಬಿ.ರಾಮಚಂದ್ರಪ್ಪ ಉಪನ್ಯಾಸ ನೀಡಲಿದ್ದಾರೆ. ರಥೋತ್ಸವ ಉದ್ಘಾಟನೆಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಡಾ.ಎಸ್.ಎ. ರವೀಂದ್ರನಾಥ್, ಕಾಂಗ್ರೆಸ್ ಮುಖಂಡ ಆರ್.ಎಸ್. ಶೇಖರಪ್ಪ ನಿಟುವಳ್ಳಿ, ಬಿಜೆಪಿ ಯುವ ಮುಖಂಡ ಮಾಡಾಳು ಮಲ್ಲಿಕಾರ್ಜುನ ಚನ್ನಗಿರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಮಲೇಬೆನ್ನೂರು, ಸಮಾಜ ಸೇವಕ ಗಂಗೂರು ನಾಗರಾಜಪ್ಪ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಮಹಾಪೌರರಾದ ಎಸ್.ಟಿ.ವೀರೇಶ್, ಉಮಾ ಪ್ರಕಾಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮುಕುಂದ, ಮಾಜಿ ಸದಸ್ಯೆ ಸವಿತ ಹುಲ್ಲುಮನೆ ಗಣೇಶ್, ಮಾಜಿ ಸದಸ್ಯೆ ರೇಣುಕಾ ಶ್ರೀನಿವಾಸ್, ಈಶಾ ಬಿಲ್ಡರ್ಸ್ ಅಂಡ್ ಡೆವಲಪ್ಪರ್ ಮಾಲೀಕ ಕೆ.ಎಸ್.ವಿಜಯ್ ಕುಮಾರ್, ದೂಡಾ ಆಯುಕ್ತ ಹುಲ್ಲುಮನೆ ತಿಮ್ಮಣ್ಣ, ದೇವಾಂಗ ಸಂಘ ಜಿಲ್ಲಾ ಅಧ್ಯಕ್ಷ ಎಂ.ಎಸ್.ರಾಮಚAದ್ರಪ್ಪ, ದೇವಾಂಗ ಹಾಸ್ಟೆಲ್ ಸಮಿತಿ ಅಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ, ನಗರ ದೇವಾಂಗ ಸಂಘದ ಅಧ್ಯಕ್ಷ ಎಸ್.ಡಿ.ರಂಗನಾಥ್, ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಅಧ್ಯಕ್ಷ ಉಮಾಪತಿ, ಹರಿಹರ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಕೋಳೂರು, ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀಕಾಂತ್ ಎಂ.ಕಾಸಿ, ನಾಮನಿರ್ದೇಶಿತ ಮಾಜಿ ಸದಸ್ಯೆ ಪುಷ್ಪಲತಾ ದಿ.ಆರ್.ಜಗನ್ನಾಥ್ ಉಪಸ್ಥಿತರಿರಲಿದ್ದಾರೆ.

ಇವರೊಂದಿಗೆ ಕೆಇಬಿ ಇಂಜಿನಿಯರ್ ಡಿ.ಹೆಚ್. ಉಮೇಶ್, ಸಮಾಜ ಸೇವಕ ಡಾ.ಕೃಷ್ಣಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀನಿವಾಸ್, ಬನಶಂಕರಿ ದೇವಸ್ಥಾನ ಗೌರವಾಧ್ಯಕ್ಷ ಎಂ.ಎಲ್.ಗೋವಿಂದಪ್ಪ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪುನಿತ್
ಶಂಕರ್, ಭೈರವೇಶ್ವರ ಎಲೆಕ್ಟಿçಕಲ್ಸ್ ಮಾಲೀಕ ಆನಂದಪ್ಪ, ಎಸ್.ಕಾಡಪ್ಪ, ಭಾಗ್ಯವತಿ ದಿ.ಕೆ.ಆರ್. ಮುರುಗಪ್ಪ, ಜೆಸಿಬಿ ಜಯಣ್ಣ, ಕೃಷ್ಣಮೂರ್ತಿ, ಆನಗೋಡು ಕೃಷ್ಣಮೂರ್ತಿ, ಜಲ್ಲಿ ನಾಗರಾಜ್, ಪಾಂಡುರಾಜು, ತರಗಾರ್ ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *