Site icon Kannada News-suddikshana

ರುಚಿಕರವಾದ ಬಾಳೆಹಣ್ಣು ಹಲ್ವಾ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

ಗೋಧಿ ಹಿಟ್ಟು- 3 ಬಟ್ಟಲು

ಸಕ್ಕರೆ ಅಥವಾ ಬೆಲ್ಲ- 3 ಬಟ್ಟಲು

ಬಾಳೆ ಹಣ್ಣು- 5

ತುಪ್ಪ- ಎರಡೂವರೆ ಬಟ್ಟಲು

ಹಾಲು- 1 ಬಟ್ಟಲು

ದ್ರಾಕ್ಷಿ-ಗೋಡಂಬಿ-ಸ್ವಲ್ಪ

ಉಪ್ಪು- ಚಿಟಿಕೆಯಷ್ಟು

ಮಾಡುವ ವಿಧಾನ…

ಒಂದು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಸೇರಿಸಿ ಪರಿಮಳ ಬರುವಂತೆ ಹುರಿಯಿರಿ.

ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಮತ್ತೆ ಹುರಿಯಿರಿ. ನಂತರ ಎರಡು ಕಪ್ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

ನಂತರ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕೆದಕಿ ಬೇಯಿಸಿ. ಗಟ್ಟಿಯಾದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಅಂಟಿಸಿ.

 

Exit mobile version