Site icon Kannada News-suddikshana

ಗಣೇಶ ಮೂರ್ತಿಗಳ ವಿರ್ಸಜನೆ ಅವಧಿ 25 ದಿನಗಳಿಗೆ ಸೀಮಿತ: ಡಿಜೆ ಸಿಸ್ಟಂ ನಿಷೇಧ, ಬಳಕೆಗೆ ಇಲ್ಲವೇ ಇಲ್ಲ ಅವಕಾಶ!

ಗಣೇಶ

ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿರ್ಸಜನೆ ಅವಧಿಯನ್ನು 25 ದಿನಗಳಿಗೆ ಸೀಮಿತಗೊಳಿಸಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.

ಆಗಸ್ಟ್ 27 ರ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವ ಅವಧಿಯನ್ನು ಸೆ.20 ರವರೆಗೆ ಮಾತ್ರ ಮುಂದುವರೆಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

READ ALSO THIS STORY: ಬೆಂಗಳೂರಿನಲ್ಲಿ 18,000 ರೂ.ನಲ್ಲೇ ಬಿಂದಾಸ್ ಲೈಫ್: ದುಬೈನಲ್ಲಿ ಹೆಚ್ಚು ದುಡಿದ್ರೂ ಇಲ್ಲ ಸಂತೋಷ, ನೆಮ್ಮದಿ!
ಡಿಜೆ ಸಿಸ್ಟಂ ಬಳಕೆ ನಿಷೇಧ:

ದಾವಣಗೆರೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಗಣೇಶಮೂರ್ತಿ ವಿಸರ್ಜನೆ ಮುಕ್ತಾಯಗೊಳ್ಳುವವರೆಗೆ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಗೊಳಿಸಿ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ. ಆದೇಶ ಹೊರಡಿಸಿದ್ದಾರೆ.

Exit mobile version