Site icon Kannada News-suddikshana

ಯಥಾ ರಾಜನಂತೆ ತಥಾ ಪ್ರಜೆ ಹೆಚ್. ಸಿ. ಮಹಾದೇವಪ್ಪ: ಬಿ. ಶ್ರೀರಾಮುಲು

B. Sriramulu

SUDDIKSHANA KANNADA NEWS/ DAVANAGERE/DATE:04_08_2025

ದಾವಣಗೆರೆ: ಯಥಾ ರಾಜ ತಥಾ ಪ್ರಜೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗಳಂತೆ ರಾಜ್ಯ ಕಾಂಗ್ರೆಸ್ ನಾಯಕರು ಸಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.  ಶ್ರೀರಾಮುಲು ಹೇಳಿದರು.

ಈ ಸುದ್ದಿಯನ್ನೂ ಓದಿ: ವೋಟರ್ ಐಡಿ, ಕ್ಯಾಂಡಿಲ್ಯಾಂಡ್ ಚಾಕೊಲೇಟ್‌ಗಳು, ಜಿಪಿಎಸ್: ಪಹಲ್ಗಾಮ್ ದಾಳಿ ಉಗ್ರರು ಪಾಕಿಸ್ತಾನದವರೆಂದು ಸಾಬೀತು!

ಬಿಜೆಪಿ ಯುವ ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಕುರಿತಂತೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಹಾಸ್ಯಾಸ್ಪದ ಎಂದು ಆರೋಪಿಸಿದರು.

ಮತ ಕಳ್ಳತನ ಬಗ್ಗೆ ದಾಖಲೆ ಇವೆ ಎನ್ನುತ್ತಾರೆ, ಈ ಬಗ್ಗೆ ಚುನಾವಣೆ ನಡೆದ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡಬೇಕಿತ್ತು, ಇದೀಗ ಇವರು ಬಿಜೆಪಿ ವಿರುದ್ಧ ಯಾವುದೇ ವಿಚಾರಗಳು ಇಲ್ಲದ ಕಾರಣ ವಿನಹ ಕಾರಣ ಜನರನ್ನು ದಾರಿ ತಪ್ಪುಸಲು ಸುಳ್ಳುಗಳನ್ನ ಹೇಳುತ್ತಿದ್ದಾರೆ. ದೇಶದಲ್ಲಿ 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಬರೀ ಸುಳ್ಳು ಹೇಳುತ್ತಲೇ ಬಂದಿದೆ. ಇದೀಗ ಜನರು ಇವರ ಸುಳ್ಳುಗಳನ್ನು ನಂಬುವುದಿಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಎಲ್ಲವೂ ಸರಿ ಇರುತ್ತದೆ, ಸೋತರೆ ಇವಿಎಂ ಮೆಷಿನ್ ಸರಿ ಇಲ್ಲ, ಮತ ಕಳ್ಳತನವಾಗಿವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಎಂದರೆ ಸುಳ್ಳಿನ ಪಕ್ಷ ಎಂದು ಗುಡುಗಿದರು.

ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಕೂಡ ಯಥಾ ರಾಜ ತಥಾ ಪ್ರಜೆ ಎಂಬಂತೆ ಮಾತನಾಡುತ್ತಿದ್ದಾರೆ. ಕೆ ಆರ್ ಎಸ್ ಅಣೆಕಟ್ಟು ನಿರ್ಮಾಣಕ್ಕೆ ಅಡಿಪಾಟ ಹಾಕಿದ್ದೇ ಟಿಪ್ಪು ಎನ್ನುವ ಮೂಲಕ ಮೈಸೂರು ಮಹಾರಾಜರಿಗೆ ಮಾತ್ರವಲ್ಲ ರಾಜ್ಯದ ಜನರಿಗೂ ಅಗೌರವ ತೋರಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಕೂಡ ಮಹಾರಾಜರಿಗಿಂತ ತನ್ನ ತಂದೆ ಹೆಚ್ಚು ಮೈಸೂರು ಅಭಿವೃದ್ಧಿ ಮಾಡಿದ್ದಾರೆ ಎನ್ನುತ್ತಾರೆ. ಇಂತ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರು ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ, ಉತ್ತಮ ಭವಿಷ್ಯ ಸಿಗುತ್ತದೆ. ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ಶ್ರೀನಿವಾಸ್ ದಾಸಕರಿಯಪ್ಪರಿಗೆ ಪಕ್ಷ ಮುಂದಿನ ದಿನಗಳಲ್ಲಿ ಗುರುತಿಸಲಿದೆ ಎಂದು ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು, ಬಿಜೆಪಿ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ನಗರಸಭ ಮಾಜಿ ಸದಸ್ಯ ಎಂ.ಹಾಲೇಶ್, ಫಣಿಯಾಪುರ ಲಿಂಗರಾಜ್, ಟಿಂಕರ್ ಮಂಜಣ್ಣ, ದಾಗಿನಕಟ್ಟೆ ನಾಗರಾಜ್, ಸಾಲಕಟ್ಟೆ ಸಿದ್ದಪ್ಪ ಮತ್ತಿತರರು ಹಾಜರಿದ್ದರು.

Exit mobile version