Site icon Kannada News-suddikshana

ಇಲ್ಲಿದೆ ರುಚಿಕರ ಅವಲಕ್ಕಿ ಉತ್ತಪ್ಪ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

ಅವಲಕ್ಕಿ- ಅರ್ಧ ಬಟ್ಟಲು

ಮೊಸರು- ಅರ್ಧ ಬಟ್ಟಲು

ರವೆ- ಅರ್ಧ ಬಟ್ಟಲು

ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 4

ಕ್ಯಾಪ್ಸಿಕಂ- 1

ಕ್ಯಾರೆಟ್- 1

ಹಸಿಮೆಣಸಿನ ಕಾಯಿ- 2-3

ಬೀನ್ಸ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)

ಕೊತ್ತಂಬರಿ ಸೊಪ್ಪು-ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಸ್ವಲ್ಪ

ಮಾಡುವ ವಿಧಾನ…

ಅವಲಕ್ಕಿಯನ್ನು ಚೆನ್ನಾಗಿ ನೆನೆಸಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಅರ್ಧ ಕಪ್ ರವೆ, ಅರ್ಧ ಕಪ್ ಮೊಸರು ಸೇರಿಸಿ. ಬೇಕೆನಿಸಿದರೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ 20 ನಿಮಿಷ ನೆನೆಯಲು ಬಿಡಿ.

ಮತ್ತೊಂದು ಬೌಲ್ ನಲ್ಲಿ ಹೆಚ್ಚಿದ ತರಕಾರಿಗಳನ್ನೆಲ್ಲಾ ಹಾಕಿ, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಕಾದ ಕಾವಲಿ ಮೇಲೆ ಮಿಶ್ರಣ ಮಾಡಿರುವ ಹಿಟ್ಟನ್ನು ಹಾಕಿ. ಹುಯ್ದ ದೋಸೆ ಮೇಲೆ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿದ್ರೆ ರುಚಿಯಾದ ಅವಲಕ್ಕಿ ಉತ್ತಪ್ಪ ಸವಿಯಲು ಸಿದ್ಧ.

Exit mobile version