Site icon Kannada News-suddikshana

ರೋಚಕ ಘಟ್ಟ ತಲುಪಿದ ಸಿಡ್ನಿ ಟೆಸ್ಟ್: ಅಲ್ಪಮೊತ್ತಕ್ಕೆ ಆಸೀಸ್ ಕಟ್ಟಿಹಾಕಿದ ಟೀಂ ಇಂಡಿಯಾ!

SUDDIKSHANA KANNADA NEWS/ DAVANAGERE/ DATE:04-01-2025

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸೀಸ್ ನಡುವಿನ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ತಂಡವನ್ನು 181ರನ್ ಗಳಿಗೆ ಆಲ್ ಔಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 185 ರನ್ ಗೆ ಆಲೌಟ್ ಆಗಿತ್ತು. ಇನ್ನು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಭಾರತ ತಂಡದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದೆ. ಕೇವಲ 181 ರನ್ ಗಳಿಗೆ ಸರ್ವಪತನ ಕಂಡಿದೆ.

ಭಾರತ ತಂಡವು ನಾಲ್ಕು ರನ್ ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಬ್ಯಾಟಿಂಗ್ ನಡೆಸಿ ಭಾರೀ ರನ್ ಪೇರಿಸಿದರೆ ಸಿಡ್ನಿ ಟೆಸ್ಟ್ ಗೆಲ್ಲಬಹುದು. ಬ್ಯಾಟಿಂಗ್ ನಲ್ಲಿ ಮತ್ತೆ ವೈಫಲ್ಯ ಅನುಭವಿಸಿದರೆ ಸರಣಿ ಕಳೆದುಕೊಳ್ಳಲಿದೆ. ಈ ಟೆಸ್ಟ್ ಪಂದ್ಯವು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಆಸೀಸ್ ಗೆ ಸರಣಿ ಜಯ ಖಚಿತ. ಈ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದರೆ ಸರಣಿ ಡ್ರಾನಲ್ಲಿ ಅಂತ್ಯವಾಗಲಿದೆ.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ಎರಡೂ ತಂಡಗಳಿಗೆ ಮಹತ್ವದ್ದು. ಭಾರತ ತಂಡದ ಬೌಲರ್ ಗಳಾದ ಸಿರಾಜ್ ಅಹಮದ್ ಮತ್ತು ಪ್ರಸಿದ್ಧ ಕೃಷ್ಣ ತಲಾ ಮೂರು ವಿಕೆಟ್ ಪಡೆದರೆ ಜಸ್ಪ್ರೀತ್ ಬೂಮ್ರಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದು ಆಸೀಸ್ ಬ್ಯಾಟಿಂಗ್ ಬೆನ್ನು ಮುರಿದರು. ಆಸೀಸ್ ಪರ ಬೋ ವೆಬ್ ಸ್ಟರ್ 57 ರನ್ ಗಳಿಸಿ ಔಟಾದರು. ಉಳಿದಂತೆ ಬ್ಯಾಟ್ಸ್ ಮನ್ ಗಳು ವೈಫಲ್ಯ ಅನುಭವಿಸಿದರು.

Exit mobile version