Site icon Kannada News-suddikshana

ಸೈಫ್ ಗೆ ಚೂರಿ ಇರಿದ ಕಿರಾತಕ ಬಾಂದ್ರಾ ರೈಲು ನಿಲ್ದಾಣದಿಂದ ಹೋಗಿದ್ದೆಲ್ಲಿಗೆ? 35 ತಂಡಗಳಿಂದ ಭಾರೀ ಶೋಧ!

SUDDIKSHANA KANNADA NEWS/ DAVANAGERE/ DATE:17-01-2025

ಮುಂಬೈ: ಬಾಂದ್ರಾ ನಿಲ್ದಾಣದಲ್ಲಿ ಸೈಫ್ ಅಲಿಖಾನ್ ದಾಳಿಕೋರನನ್ನು ಜನರು ನೋಡಿದ್ದಾರೆ. 35 ತಂಡಗಳು ಆರೋಪಿ ಪತ್ತೆಗೆ ಶೋಧ ನಡೆಸುತ್ತಿವೆ.

ಗುರುವಾರ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ನಟ ಸೈಫ್ ಅಲಿ ಖಾನ್‌ಗೆ ಚೂರಿಯಿಂದ ಇರಿದು ನಾಪತ್ತೆಯಾಗಿರುವ ಆರೋಪಿ ಹಿಡಿಯಲು ಪೊಲೀಸರು ಭಾರೀ ಹರಸಾಹಸ ಪಡುತ್ತಿದ್ದಾರೆ.

ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು ಹೊರ ಹೋಗುವ ಫೋಟೋ ಬಿಡುಗಡೆ ಮಾಡಲಾಗಿದ್ದು, ಈತನನ್ನು ಬಾಂದ್ರಾ ನಿಲ್ದಾಣದಲ್ಲಿ ಜನರು ನೋಡಿರುವ ಮಾಹಿತಿ ಸಿಕ್ಕಿದೆ.

ದಾಳಿಯ ನಂತರ ಬಾಂದ್ರಾ ರೈಲು ನಿಲ್ದಾಣದ ಸುತ್ತಲೂ ಕಾಣಿಸಿಕೊಂಡಿದ್ದಾನೆ. ಆರೋಪಿ ಪತ್ತೆಹಚ್ಚಲು ಪೊಲೀಸರು 35 ತಂಡಗಳನ್ನು ರಚಿಸಿದ್ದರು. ಶಂಕಿತನು ಬೆಳಿಗ್ಗೆ ಮೊದಲ ಸ್ಥಳೀಯ ರೈಲು ಹತ್ತಿರಬಹುದು ಎಂದು ಮಾಹಿತಿ ಸಿಕ್ಕಿದೆ.

ವಸೈ ಮತ್ತು ನಲಸೋಪಾರಾ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version