SUDDIKSHANA KANNADA NEWS/DAVANAGERE/DATE:28_11_2025
ದಾವಣಗೆರೆ: ಗಾಂಧಾರಿ ವಿದ್ಯೆಯಲ್ಲಿ ನಗರದ ವಿಶ್ವಚೇತನ ವಿದ್ಯಾನಿಕೇತನ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎನ್.ಶಿವರಾಜ್ ಗೌಡ್ರು ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತಿ ಹೆಚ್ಚಿನ 5 ಅಕ್ಷರಗಳ 100 ಇಂಗ್ಲೀಷ್ ಪದಗಳನ್ನು 12 ನಿಮಿಷ 23 ಸೆಕೆಂಡುಗಳಲ್ಲಿ ಹೇಳಿ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿ, ಈಗ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿರುವ ಇವರು ನಗರದ ರುದ್ರಪ್ಪನವರ ಮೊಮ್ಮಗ ಹಾಗೂ ಚಂದ್ರಪ್ರಭಾ ಮತ್ತು ನಿರಂಜನ ಇವರ ಪುತ್ರರಾಗಿದ್ದಾರೆ. ಮಂಜುನಾಥ್ ಪೂಜಾರ್ ಇವರ ಬಳಿ ಗಾಂಧಾರಿ ವಿದ್ಯೆ ತರಬೇತಿ ಪಡೆಯುತ್ತಿದ್ದಾರೆ.




Leave a comment