Site icon Kannada News-suddikshana

ಟ್ರ್ಯಾಕ್ಟರ್ ಟ್ರೈಲರ್, ತೇಗದ ಮರ ಕಳವು ಮಾಡಿದ್ದ ಇಬ್ಬರು ಆರೋಪಿಗಳ ಸೆರೆ: 14 ಲಕ್ಷ ರೂ. ಮೌಲ್ಯದ ಟ್ರೈಲರ್ ಗಳ ವಶ

SUDDIKSHANA KANNADA NEWS/ DAVANAGERE/ DATE:09-11-2023

ದಾವಣಗೆರೆ: ರೈತರ ಟ್ರೈಲರ್ ಮತ್ತು ತೇಗದ ಮರ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸರು ಬಂಧಿಸಲಾಗಿದೆ.

ಶಿವಮೊಗ್ಗ ತಾಲೂಕಿನ ಕೊಮ್ಮನಹಾಳ್ ಗ್ರಾಮದ ಚಾಲಕ ಮನೋಜ್ (23), ಮಧು (21), ಬಂಧಿತ ಆರೋಪಿಗಳು. ಕಳೆದ ಏಪ್ರಿಲ್ ತಿಂಗಳ 13ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ತನ್ನ ಜಮೀನಿನಲ್ಲಿ ಕೆಲಸವನ್ನು ಮುಗಿಸಿ, ನಿಲ್ಲಿಸಿದ್ದ 1,20,000 ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಟ್ರೈಲರ್ ಕಳವು ಮಾಡಿದ್ದ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ ಮತ್ತು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಮಲೇಬೆನ್ನೂರು ಅವರ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡ ರಚಿಸಲಾಗಿತ್ತು.

ಮಲೇಬೆನ್ನೂರು ಪೊಲೀಸ್ ಠಾಣೆಯ 2 ಟ್ರೈಲರ್ ಕಳ್ಳತನ ಪ್ರಕರಣಗಳು, ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಠಾಣೆಯ 1, ನ್ಯಾಮತಿ ಪೊಲೀಸ್ ಠಾಣೆಯ 2 ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ 2 ಟ್ರೈಲರ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. 14 ಲಕ್ಷ ರೂಪಾಯಿ ಮೌಲ್ಯದ 7 ಟ್ರೈಲರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯಾಮತಿ ಪೊಲೀಸ್ ಠಾಣೆಯ 1 ತೇಗದ ಮರ ಕಳ್ಳತನ ಪ್ರಕರಣವನ್ನು ಭೇದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ 35 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಟ್ರೈಲರ್ ಹಾಗೂ ತೇಗದ ಮರದ ಕಳ್ಳತನ ಪ್ರಕರಣಗಳನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ, ಸಿಬ್ಬಂದಿ ಫೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ, ರಾಜಶೇಖರ್, ಸಂತೋಷಕುಮಾರ್, ಪ್ರದೀಪ್, ಹನುಮಂತ ರೆಡ್ಡಿ, ರಂಗಪ್ಪ, ರಾಘವೇಂದ್ರ, ಶಾಂತರಾಜ್, ಶಿವಕುಮಾರ್, ರಾಜಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

Exit mobile version