Site icon Kannada News-suddikshana

EXCLUSIVE: ವಿದ್ಯಾರ್ಥಿನಿಯೊಂದಿಗೆ ಮೆಡಿಕಲ್ ಶಾಪ್ ಮಾಲೀಕ ರಾಸಲೀಲೆ ವಿಡಿಯೋ ವೈರಲ್: ಆರೋಪಿ ಸೆರೆ!

SUDDIKSHANA KANNADA NEWS/ DAVANAGERE/ DATE:31-01-2025

ದಾವಣಗೆರೆ: ಶಾಲಾ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ದಾವಣಗೆರೆಯ ದೇವರಾಜ್ ಅರಸ್ ಲೇ ಔಟ್ ನ ಅಮ್ಜದ್ ಬಂಧಿತ ಆರೋಪಿ. ಪೊಲೀಸರು ಸುಮಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಚನ್ನಗಿರಿಯ ಅಮರ್ ಮೆಡಿಕಲ್ ಶಾಪ್ ನಡೆಸುತ್ತಿದ್ದ ಆರೋಪಿ ಅಮ್ಜದ್ ದಾವಣಗೆರೆಯ ದೇವರಾಜ್ ಅರಸ್ ಲೇಔಟ್ ನಿವಾಸಿ. ಕೌಟುಂಬಿಕ ಕಲಹವೂ ಇತ್ತು ಎನ್ನಲಾಗಿದೆ. ಈ ನಡುವೆ ಚನ್ನಗಿರಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಅಮ್ಜದ್ ಶಾಲಾ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸುಮಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚನ್ನಗಿರಿ ತಾಲೂಕಿನಲ್ಲಿ ಅಮ್ಜದ್ ನಡೆಸಿದ್ದ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಯೇ ವಿಡಿಯೋ ವೈರಲ್ ಮಾಡಿದ್ದ ಎನ್ನಲಾಗಿದೆ. ಇದು ಸ್ಥಳೀಯರನ್ನು ಕೆರಳುವಂತೆ ಮಾಡಿತ್ತು. ಆದ್ರೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವ ಮೂಲಕ ಚಾಕಚಕ್ಯತೆ ತೋರಿದ್ದಾರೆ.

ಚನ್ನಗಿರಿ ಬಸ್ ನಿಲ್ದಾಣ ಸಮೀಪ ಅಮರ್ ಮೆಡಿಕಲ್ ಶಾಪ್ ಅನ್ನು ಕಳೆದ ಕೆಲ ವರ್ಷಗಳಿಂದ ನಡೆಸುತ್ತಿದ್ದ. ಇಲ್ಲಿಗೆ ಬರುತ್ತಿದ್ದ ಶಾಲಾ ವಿದ್ಯಾರ್ಥಿನಿಯರು, ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಹೇಳಲಾಗುತ್ತಿದೆ. ಆದ್ರೆ, ಚನ್ನಗಿರಿಯಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿ ಜೊತೆ ರಾಸಲೀಲೆ ನಡೆಸಿರುವ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಈ ವಿಡಿಯೋ ಸ್ನೇಹಿತರಿಗೆ ಆರೋಪಿ ಅಮ್ಜದ್ ಕಳುಹಿಸಿದ್ದ ಎನ್ನಲಾಗಿದೆ. ಈ ವಿಡಿಯೋ ಚನ್ನಗಿರಿ ತಾಲೂಕಿನ ಕೆಲವೆಡೆ ವೈರಲ್ ಕೂಡ ಆಗಿತ್ತು.

ಪ್ರಕರಣದ ಗಂಭೀರತೆ ಅರಿತ ಎಸ್ಪಿ ಉಮಾ ಪ್ರಶಾಂತ್ ಅವರು ಕೂಡಲೇ ಕಾರ್ಯಪ್ರವೃತ್ತರಾದರು. ಚನ್ನಗಿರಿ ಮತ್ತು ಗಾಂಧಿನಗರ ಪೊಲೀಸರು, ಸಿಇಎನ್ ಪೊಲೀಸರಿಗೆ ಸೂಚನೆ ನೀಡಿದರು.

Exit mobile version