SUDDIKSHANA KANNADA NEWS/DAVANAGERE/DATE:28_09_2025
ದಾವಣಗೆರೆ: ಲಾಂಗ್ ಹಿಡಿದು ಓಡಾಡಿದ್ದ ಯುವಕನನ್ನು ದಾವಣಗೆರೆ ಆರ್ ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
READ ALSO THIS STORY: ಸಿರಿಗೆರೆ, ಸಾಣೇಹಳ್ಳಿ ಶ್ರೀಗಳು ಒಂದಾಗುವವರೆಗೆ ಉಪವಾಸ ಸತ್ಯಾಗ್ರಹ: ಖಡ್ಗ ಸಂಘಟನೆ ಎಚ್ಚರಿಕೆ!
ಟಿಪ್ಪುನಗರದ ಅಬ್ದುಲ್ ಸಮದ್ ಬಂಧಿತ ಆರೋಪಿ. ನಗರದ ಆರ್ ಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನೆಕೊಂಡ ಬಸವೇಶ್ವರ ದೇವಸ್ಥಾನಿಂದ ಕಲ್ಲೇಶ್ವರ ಮಿಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕವಾಗಿ
ಲಾಂಗ್ ಹಿಡಿದು ಓಡಾಡುತ್ತಾ ಜನರಲ್ಲಿ ಭಯ ಉಂಟು ಮಾಡಿದ್ದ. ಈ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಲಾಂಗ್ ಹಿಡಿದು ಓಡಾಡುವ ವಿಡಿಯೋ ಮತ್ತು ಇಬ್ಬರು ಯುವಕರು ಆತನನ್ನು ಸಮಾಧಾನಪಡಿಸುತ್ತಾ ಕರೆದುಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆರೋಪಿ ಆಯುಧ ಹಿಡಿದು ಓಡಾಡಿದ್ದರೂ ಪೊಲೀಸರು ಬಂಧಿಸದ
ಕ್ರಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.