SUDDIKSHANA KANNADA NEWS/ DAVANAGERE/DATE:07_09_2025
ದಾವಣಗೆರೆ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹರಿಹರ ನಗರ ಪೊಲೀಸರು ಬಂಧಿಸಿದ್ದು, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
READ ALSO THIS STORY: BIG NEWS: ಧರ್ಮಸ್ಥಳ ತಲೆಬುರುಡೆ ಕೇಸ್ ನಲ್ಲಿ 50ರಿಂದ 60 ಮಂದಿಯಿಂದ ಸಂಚು? ಎಸ್ಐಟಿಗೆ ಸಿಕ್ಕಿದೆ ಸಾಕ್ಷ್ಯ!
ಹರಿಹರದ ತನ್ವೀರ್ ಖಾನ್, ಸಮೀವುಲ್ಲಾ @ ಸಮೀರ್, ಮುಬಾರಕ್ ಬಂಧಿತ ಆರೋಪಿಗಳು.
ಕಳೆದ ಆಗಸ್ಟ್ 18ರಂದು ಹರಿಹರ ನಗರದ ಬಜಾರ್ ಮೊಹಲ್ಲಾ ವಾಸಿಯಾದ ಅಬ್ದುಲ್ ವಾಹಿದ್ ಅವರು ಬೈಕ್ ಕಳ್ಳತನವಾಗಿರುವ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೈಕ್ ಕಳ್ಳತನ ಪ್ರಕರಣದ ಆರೋಪಿತರ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರ ಹಾಗೂ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ. ಎಸ್. ಅವರ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಆರ್.ಎಫ್. ದೇಸಾಯಿ ರವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಕಾರ್ಯಚರಣೆ ಕೈಗೊಂಡಿದ್ದು, ತಾಂತ್ರಿಕ ಹಾಗೂ ಭಾತ್ಮೀದಾರರ ಮಾಹಿತಿ ಮೇರೆಗೆ ಆರೋಪಿತರ ಸುಳಿವು ಪಡೆದು ಬೈಕ್ ಕಳ್ಳತನದ ಆರೋಪಿತರಾದ ತನ್ವೀರ್ ಖಾನ್, ಸಮೀವುಲ್ಲಾ @ ಸಮೀರ್, ಮುಬಾರಕ್ ನನ್ನು ಬಂಧಿಸಿ ಬಂಧಿತರಿಂದ ಅಂದಾಜು 2,55,000 ರೂ ಬೆಲೆಯ 8 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಲಾಗಿರುತ್ತದೆ.
ವಶಪಡಿಸಿಕೊಂಡ ಬೈಕ್ ಗಳಲ್ಲಿ ಹರಿಹರ ನಗರ ಠಾಣೆಯ 6 ಪ್ರಕರಣಗಳು ಹಾಗೂ ರಾಣೆಬೆನ್ನೂರು ನಗರದ 1 ಪ್ರಕರಣ, ಮಲೆಬೆನ್ನೂರು ಠಾಣೆಯ 1 ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬೇಧಿಸಲಾಗಿದೆ. ಆರೋಪಿಗಳನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ನಿರೀಕ್ಷಕ ಆರ್.ಎಫ್. ದೇಸಾಯಿ, ಪಿ.ಎಸ್.ಐ ಶ್ರೀಪತಿ ಗಿನ್ನಿ, ಸಿಬ್ಬಂದಿಗಳಾದ ನಾಗರಾಜ ಸುಣಗಾರ, ದಿಲೀಪ್. ಕೆ.ಸಿ, ಶಾಂತರಾಜ್ ಎಂ.ಎಸ್, ಸಿದ್ದೇಶ.ಹೆಚ್, ಮಂಜುನಾಥ ಕ್ಯಾತಮ್ಮನವರ್, ದೇವರಾಜ್
ಸೂರ್ವೆ, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು
ಅಭಿನಂದಿಸಿದ್ದಾರೆ.