Site icon Kannada News-suddikshana

ಫ್ರಾನ್ಸ್ ನಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್ ಬಂಧನ!

ಪ್ಯಾರಿಸ್: ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್(39) ಅವರನ್ನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಅಧಿಕಾರಿಗಳು ಬಂಧಿಸಿದ್ದಾರೆ.

ಟೆಲಿಗ್ರಾಮ್ ಪ್ಲಾಟ್‌ಫಾರ್ಮ್ ಗೆ ಸಂಬಂಧಪಟ್ಟ ಅಪರಾಧಗಳಿಗೆ ಸಂಬಂಧಿಸಿದ ವಾರಂಟ್ ಅಡಿಯಲ್ಲಿ ಟೆಕ್ ಉದ್ಯಮಿ ಪಾವೆಲ್ ದುರೋವ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರೋವ್ ಅವರ ಬಂಧನದ ಸುದ್ದಿ ಕೇಳಿ ಕೆಲವು ರಷ್ಯಾದ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಫ್ರಾನ್ಸ್ ನ ಕ್ರಮವನ್ನು ಖಂಡಿಸಿದ್ದಾರೆ. ವಿಶ್ವಾದ್ಯಂತ ಫ್ರೆಂಚ್ ರಾಯಭಾರ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಆಪ್ ಅನ್ನು ಉಕ್ರೇನ್ ನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರು ಹೆಚ್ಚಾಗಿ ಬಳಸುತ್ತಾರೆ. ಇಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಶೋಧಿಸದ ಮಾಹಿತಿಯ ಮೂಲವಾಗಿ ಟೆಲಿಗ್ರಾಮ್ ಪ್ರಾಮುಖ್ಯತೆ ಪಡೆದಿದೆ.

ರಷ್ಯಾ ಮೂಲದ ಪಾವೆಲ್ ದುರೋವ್, ದುಬೈನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಅವರು ಕೆಲ ಸರ್ಕಾರಗಳು ನನ್ನ ಮೇಲೆ ಒತ್ತಡ ಹೇರಿದ್ದರೂ, ಟೆಲಿಗ್ರಾಮ್ “ತಟಸ್ಥ ವೇದಿಕೆ”ಯಾಗಿ ಉಳಿಯಬೇಕು ಎಂದು ತಿಳಿಸಿದ್ದರು.

Exit mobile version