Site icon Kannada News-suddikshana

ಮಳ್ಳಿಯರ ಕಳ್ಳತನದ ಕರಾಮತ್ತು: ಇಬ್ಬರು ಮಹಿಳೆಯರ ಬಂಧನ, 1 ಲಕ್ಷ ನಗದು ವಶ!

ಮಹಿಳೆ

SUDDIKSHANA KANNADA NEWS/ DAVANAGERE/ DATE:14_07_2025

ದಾವಣಗೆರೆ: ಗಮನ ಬೇರೆಡೆ ಸೆಳೆದು ಸುಮಾರು 1 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ ಇಬ್ಬರು ಖತರ್ನಾಕ್ ಮಹಿಳೆಯರನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

READ ALSO THIS STORY: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ

ಮಧ್ಯಪ್ರದೇಶದ ರಾಜಘಡ್ ಜಿಲ್ಲೆಯ ಕಡಿಯಾಸಾಂಸಿ ಪಿಚೋರ್ ತಾಲೂಕಿನ ಪಿಪಿಯಾರಸೂಡ ಗ್ರಾಮದ ಪ್ರಿಯಾಂಕಾ ಸಿಸೋಡಿಯಾ ಮತ್ತು ಕಡಿಯಾ ಗ್ರಾಮದ ಪ್ರಿಯಾಂಕಾ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ:

ಕಳೆದ ಜುಲೈ 11ರಂದು ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣಿಗೆರೆ ಗ್ರಾಮದ ಲತಾ ಅವರು ಸಂತೆಬೆನ್ನೂರು ಕೆನರಾ ಬ್ಯಾಂಕಿನಲ್ಲಿ ಗಿರಿವಿ ಇಟ್ಟಿದ್ದ ಬಂಗಾರದ ಒಡವೆಗಳನ್ನು ಬಿಡಿಸಲು ಹಣ ತಂದಿದ್ದರು. ಈ ವೇಳೆ ಲತಾ ಅವರ ಗಮನ ಬೇರೆಡೆ ಸೆಳೆದು ಅವರ ಬಳಿ ಇದ್ದ ಹಣದಲ್ಲಿ ಸುಮಾರು 1 ಲಕ್ಷ ರೂಪಾಯಿ ಕಳ್ಥತನ ಮಾಡಿಕೊಂಡು ಮಹಿಳೆಯರು ಪರಾರಿಯಾಗಲು ಯತ್ನಿಸಿದ್ದರು.

ಲತಾ ಕೂಡಲೇ ಕಿರಾಚಾಡಿದ್ದು, ಅಲ್ಲೇ ಇದ್ದ ಸಾರ್ವಜನಿಕರು ಇಬ್ಬರು ಮಹಿಳೆಯರನ್ನು ಹಿಡಿದರೆ, ಮೂವರ ಪೈಕಿ ಓರ್ವ ಮಹಿಳೆ ಓಡಿ ಹೋಗಿದ್ದಳು.

ಪ್ರಕರಣ ದಾಖಲಾದ ಮೂರು ದಿನದಲ್ಲಿಯೇ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿತರಿಂದ ಕಳವು ಆಗಿದ್ದ ಸುಮಾರು ಒಂದು ಲಕ್ಷ ರೂಪಾಯಿ ಜಫ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿತೆಯ ಪತ್ತೆ ಕಾರ್ಯ ಮುಂದುವರೆದಿದೆ.

ಈ ಪತ್ತೆ ಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರಾದ ಚನ್ನವೀರಪ್ಪ ಪಿಎಸ್ಐ ರವಿ ಟಿ., ಎಎಸ್ಐ ವೀರಭದ್ರಪ್ಪ, ರುದ್ರಪ್ಪ, ಶ್ರೀನಿವಾಸ, ಮಂಜುನಾಥ, ಮಾರುತಿ, ರಾಘವೇಂದ್ರ, ಸಂತೋಷ್, ಸಂತೋಷ್ ಪಾಟೀಲ್, ಹಾಲೇಶ್ ಅವರನ್ನೊಳಗೊಂಡ ತಂಡವು ಪ್ರಕರಣ ದಾಖಲಾದ ಕೇವಲ 3 ದಿನದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತದೆ. ಈ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Exit mobile version