Site icon Kannada News-suddikshana

ಒಂಟಿ ಮಹಿಳೆ ಮೇಲೆ ಹಲ್ಲೆ: ಆರೋಪಿ ಬಂಧನ!

ಮಹಿಳೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಾರಿಗನೂರು ಕ್ರಾಸ್ ಗ್ರಾಮದ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.

READ ALSO THIS STORY: 150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ವೀರಮ್ಮ ಸಂಬಂಧಿ ದಾವಣಗೆರೆ ತಾಲೂಕಿನ ಕಾರಿಗನೂರು ಕ್ರಾಸ್ ಗ್ರಾಮದ ಹೆಚ್. ನವೀನ್ (27) ಬಂಧಿತ ಆರೋಪಿ.

ಘಟನೆ ಹಿನ್ನೆಲೆ:

2025ರ ಅಕ್ಟೋಬರ್ 3ರಂದು ಬೆಳಗ್ಗೆ ಸುಮಾರು 8.45ರಿಂದ 11.15ರ ಅವಧಿಯಲ್ಲಿ ದಾವಣಗೆರೆ ತಾಲ್ಲೂಕು ಕಾರಿಗನೂರು ಕ್ರಾಸ್ ಗ್ರಾಮದ ವಾಸಿ ಕೆ. ಎಂ. ಉಮಾಪತಿ ಅವರ ಪತ್ನಿ ವೀರಮ್ಮ ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ನೋಡಿಕೊಂಡು ಯಾರೋ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿದ್ದರು. ಈ ವೇಳೆ ವೀರಮ್ಮನವರ ತಲೆಗೆ ಹೊಡೆದು ಆಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಹದಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೀರಮ್ಮ ಅವರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರೋಪಿ ಮತ್ತು ಆಭರಣ ಪತ್ತೆಗಾಗಿ ಡಿವೈಎಸ್‌ಪಿ ಬಿ.ಎಸ್ ಬಸವರಾಜ್, ಸಿಪಿಐ ರಾಘವೇಂದ್ರ ಕೆ.ಎನ್, ಪಿ.ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿ, ಅಜ್ಜಪ್ಪ ಎಸ್.ಬಿ ಮತ್ತು ಅವರ ಸಿಬ್ಬಂದಿಯವರನ್ನು ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಪಿಎಸ್ ಐ ಶ್ರೀಶೈಲಪಟ್ಟಣಶೆಟ್ಟಿ ಮತ್ತು ಸಿಬ್ಬಂದಿಯೊಂದಿಗೆ ಗಾಯಾಳು ವೀರಮ್ಮ ಅವರ ಸಂಬಂಧಿ ನವೀನನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಗಾಯಾಳು ವೀರಮ್ಮನಿಗೆ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Exit mobile version