ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

5 ಲಕ್ಷ ರೂ.ಗೆ ಬೇಡಿಕೆ ಇಟ್ಟು ಹಣ ವಸೂಲಿ ಮಾಡಿದ್ದ ಹಿಂದೂ ಜನಜಾಗೃತಿ ಸೇನಾ ಸಮಿತಿ ಅಧ್ಯಕ್ಷ ಬಂಧನ

On: February 18, 2024 11:51 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-02-2024

ದಾವಣಗೆರೆ: ಐದು ಲಕ್ಷ ರೂಪಾಯಿಗೆ ಹಣ ಬೇಡಿಕೆ ಇಟ್ಟು, ಬೆದರಿಕೆ ಆರೋಪದಡಿ ಹಿಂದೂ ಜನ ಜಾಗೃತಿ ಸೇನಾ ಸಮಿತಿ ಎಂಬ ಹೆಸರಿನ ಸಂಘಟನೆಯ ಅಧ್ಯಕ್ಷನನ್ನು ಬಂಧಿಸಲಾಗಿದೆ.

ಚೇತನ್ ಅಲಿಯಾಸ್ ಚೇತನ್ ಕನ್ನಡಿಗ ಬಂಧಿತ ಆರೋಪಿ. 2023ರ ಅಕ್ಟೋಬರ್ 26ರಂದು ಆರೋಪಿ ಚೇತನ್ ತನ್ನ ಸಹಚರರೊಂದಿಗೆ ಸೇರಿಕೊಂಡು ದಾವಣಗೆರೆ ನಗರದ ಕರೂರು ಇಂಡಿಸ್ಟ್ರಿಯಲ್ ಏರಿಯಾದಲ್ಲಿರುವ ಸೈಯದ್ ಅಕ್ಬರ್ ಅಲಿ ಎಂಬುವರಿಗೆ ಸೇರಿದ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನ್ನು ಅನಧಿಕೃತವಾಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಸುತ್ತಿದ್ದೀರಿ. ಈ ಶಾಲೆಯ ವಿರುದ್ಧ ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರು ಅರ್ಜಿಯನ್ನು ವಾಪಸ್ ಪಡೆಯುವ ಸಲುವಾಗಿ ಈ ಶಾಲೆಯ ವಿರುದ್ದ ಸಲ್ಲಿಸಿರುವಂತಹ ದೂರುಗಳನ್ನು ಹಿಂಪಡೆಯಲು 5 ಲಕ್ಷ ರೂಪಾಯಿ ನೀವು ನಮಗೆ ಕೊಡಬೇಕು. ನಮ್ಮದೆಲ್ಲಾ ಒಂದು ಟೀಂ ವರ್ಕ್ ಇದೆ. ಅವರಿಗೆಲ್ಲಾ ಹಂಚಲು ಕನಿಷ್ಟ ಪಕ್ಷ ಅಷ್ಟು ಹಣವಾದರೂ ಬೇಕು ಎಂದು ಬೇಡಿಕೆಯನ್ನಟ್ಟಿದ್ದ.

ಇಲ್ಲವಾದರೆ ಶಾಲೆಯನ್ನು ಮುಚ್ಚಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ಫಿರ್ಯಾದಿಯಿಂದ ಹಣ ಸುಲಿಗೆ ಮಾಡಿದ್ದು, ಅಲ್ಲದೆ ಕೇಳಿದಷ್ಟು ಹಣವನ್ನು ಕೊಡದೇ ಇದ್ದಾಗ ಪದೇ ಪದೇ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಹತ್ತಿರ ಹೋಗಿ ಅಲ್ಲಿಯೂ ಹಣಕ್ಕೆ ಬೆದರಿಕೆ ಹಾಕಿದ್ದು, ಈ ಬಗ್ಗೆ 2023ರ ಅಕ್ಟೋಬರ್ 26ರಂದು ಸೈಯದ್ ಅಕ್ಬರ್ ಅಲಿ ಅವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣವನ್ನು ದಾವಣಗೆರೆ ಜಿಲ್ಲಾ ಪೊಲಿಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮತ್ತು ಅಪರ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ, ಜಿ.ಮಂಜುನಾಥ್ ಮತ್ತು ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಆಜಾದ್ ನಗರ (ಗಾಂಧಿನಗರ) ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ನಹೀಂ ಅಹಮದ್ ಟಿ. ಆರ್. ಹಾಗೂ ಸಿಬ್ಬಂದಿಯವರು ಪ್ರಕರಣದ ಪ್ರಮುಖ ಆರೋಪಿತನಾದ ಚೇತನ್ ಜಿ ಅಲಿಯಾಸ್ ಚೇತನ್ ಕನ್ನಡಿಗ (28) ಕೆ.ಟಿ.ಜೆ ನಗರ ದಾವಣಗೆರೆ ಈತನನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ಈತನು ಕೃತ್ಯ ಕಾಲಕ್ಕೆ ಉಪಯೋಗಿಸಿದ 15 ಸಾವಿರ ರೂಪಾಯಿ ಮೌಲ್ಯದ ಮೊಬೈಲ್, ಸ್ಕೂಟರ್ ವಶಪಡಿಸಿಕೊಂಡು ಆರೋಪಿ ಚೇತನ್ ಅಲಿಯಾಸ್ ಚೇತನ್ ಕನ್ನಡಿಗ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನು ಇದೇ ರೀತಿ ಇತರೆ ಕಡೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ.

ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ನಹೀಂ ಅಹಮದ್, ಸಿಬ್ಬಂದಿಯಾದ ನಿಜಲಿಂಗಪ್ಪ, ಸಿದ್ದೇಶ್, ದ್ಯಾಮೇಶ್, ಶಫಿವುಲ್ಲಾ ಸಿದ್ಧಾಕಲಿ, ನಾಗರಾಜ ಅವರ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment