Home ಕ್ರೈಂ ನ್ಯೂಸ್ ಅಪ್ಪನ ಜೊತೆಗೆ ಕಳ್ಳತನಕ್ಕಿಳಿದಿದ್ದ ಮಕ್ಕಳ ಬಂಧನ: ದಾವಣಗೆರೆ ಜಿಲ್ಲೆ ವಿವಿಧೆಡೆ ಕಳವು ಮಾಡಿ ಸಿಕ್ಕಿಬಿದ್ದ ಖದೀಮರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅಪ್ಪನ ಜೊತೆಗೆ ಕಳ್ಳತನಕ್ಕಿಳಿದಿದ್ದ ಮಕ್ಕಳ ಬಂಧನ: ದಾವಣಗೆರೆ ಜಿಲ್ಲೆ ವಿವಿಧೆಡೆ ಕಳವು ಮಾಡಿ ಸಿಕ್ಕಿಬಿದ್ದ ಖದೀಮರು!

Share
Share

ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ಅಪ್ಪ ಮಕ್ಕಳನ್ನು ಬಂಧಿಸುವಲ್ಲಿ ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ನಗರದ ಆರ್ ಟಿಒ ಕಚೇರಿ ಬಳಯ ಯರಗುಂಟೆ ರಸ್ತೆಯ ವಾಸಿಗಳಾದ ವೀರೇಶ್, ಶಿವಕುಮಾರ್ ಅಲಿಯಾಸ್ ಶಿವು, ಮಂಜುನಾಥ ಬಂಧಿತ ಆರೋಪಿಗಳು. ಈ ಆರೋಪಿಗಳು ಹರಿಹರ ತಾಲೂಕಿನ ಶಂಷಿಪುರ ಗ್ರಾಮದಲ್ಲಿ ವಾಸವಾಗಿದ್ದರು.

ಹರಿಹರ ತಾಲೂಕಿನ ದೊಗ್ಗಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಎಂದಿನಂತೆ ದೇವಸ್ಥಾನದ ಆರ್ಚಕರಾದ ರಾಜಪ್ಪ ಅವರು ಜನವರಿ 2ರಂದು ರಾತ್ರಿ 8 ಗಂಟೆಗೆ ಬೀಗವನ್ನು ಹಾಕಿಕೊಂಡು ಹೋಗಿದ್ದರು.

ಮರು ದಿನ ಅಂದರೆ ಜನವರಿ 3ರಂದು ಬೆಳಿಗ್ಗಿನ ಜಾವ 3.40 ರ ಸಮಯದಲ್ಲಿ ದೇವಸ್ಥಾನದ ಬಾಗಿಲು ತೆರೆದಿತ್ತು. ಕೂಡಲೇ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರು ಪರಿಶೀಲಿಸಿ ನೋಡಲಾಗಿ ದೇವಸ್ಥಾನದಲ್ಲಿದ್ದ ಬೆಳ್ಳಿಯ ಕಾಶಿ, ಬೆಳ್ಳಿ ಕಿರೀಟ, ಬೆಳ್ಳಿಯ ಆಂಜನೇಯ ಮುಖ, ಒಂದು ಬೆಳ್ಳಿಯ ಹಸ್ತ, ಬೆಳ್ಳಿಯ ಸಿಂಹದ ಮುಖ, ಒಂದು ಬೆಳ್ಳಿಯ ಛತ್ರಿ ಸೇರಿದಂತೆ ಇತರೆ ವಸ್ತುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ರಾಜಪ್ಪ ಅವರು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಗುನ್ನೆ ನಂ : 01/2026 ಕಲಂ : 331(4), 305 ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಗಿತ್ತು.

ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಸವರಾಜ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯುವರಾಜ ಕಂಬಳಿ, ಮಂಜುಳಾ ಡಿ. ಅವರನ್ನೊಳಗೊಂಡ ಸಿಬ್ಬಂದಿಗಳ ತಂಡವು ಪತ್ತೆ ಕಾರ್ಯ ಕೈಗೊಂಡಿತ್ತು.

ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಆರೋಪಿತರಾದ ಶಿವುಕುಮಾರ ಅಲಿಯಾಸ್ ಶಿವು, 68 ವರ್ಷದ ವೀರೇಶ್, ಮಂಜುನಾಥನನ್ನು ಬಾತ್ಮೀದಾರರ ಮಾಹಿತಿ ಮೇರೆಗೆ ಹರಿಹರ ಬೈಪಾಸ್ ಹತ್ತಿರ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತು.

ಆರೋಪಿತರಿಂದ ಹರಿಹರ ಗ್ರಾಮಾಂತರ ಠಾಣೆಯ ಗುನ್ನೆ ನಂ : 01/2026 ರಲ್ಲಿ 03 ಕೆಜಿ ಬೆಳ್ಳಿಯ ಆಭರಣಗಳು ಹಾಗೂ ಆರೋಪಿತರುಗಳು ಈ ಹಿಂದೆ ಮಲೆಬೆನ್ನೂರು ಠಾಣಾ ವ್ಯಾಪ್ತಿಯ ಮಲೆಬೆನ್ನೂರು ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಕೆಎ 17 ಇಜಿ 2054 ನೇ ಬಜಾಜ್ ಪ್ಲಾಟಿನಾ ಬೈಕ್ ಹಾಗೂ ಮಲೆಬೆನ್ನೂರು ಪಟ್ಟಣದ ನೆಹರು ನಗರದ ಶ್ರೀ ರಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದ ಸುಮಾರು 20 ಗ್ರಾಂ ತೂಕದ ಬಂಗಾರದ 4 ತಾಳಿಗಳು, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಕೆಎ 17 ಇಎಸ್ 6892 ನೇ ಹಿರೋ ಡಿಲಕ್ಸ್ ಬೈಕ್ ಒಳಗೊಂಡಂತೆ ಒಟ್ಟು ಅಂದಾಜು 10,90,000 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದೆ.

ಆರೋಪಿತರ ಹಿನ್ನೆಲೆ: ಈ ಆರೋಪಿತರು 2020ರಲ್ಲಿ ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಕುರಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles