Site icon Kannada News-suddikshana

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; 4ನೇ ಆರೋಪಿ ಮುಸ್ತಾಫ ಪೈಚಾರ್ ಅರೆಸ್ಟ್

ಸುಳ್ಯ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಮುಸ್ತಾಫ ಪೈಚಾರ್ ಕೊನೆಗೂ ಎನ್‌ಐಎ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಹತ್ಯೆ ಪ್ರಕರಣದ ಆರೋಪಿ ಮುಸ್ತಾಫ ಪೈಚಾರ್ ಯಾನೆ ಮಹಮ್ಮದ್ ಮುಸ್ತಾಫ ಎಸ್(43) ತಲೆಮರೆಸಿಕೊಂಡಿದ್ದ. ಇದೀಗ ಈತನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇಂದು ಬೆಳಗ್ಗೆ ಎನ್.ಐ.ಎ ಇನ್‌ಸ್ಪೆಕ್ಟರ್ ಷಣ್ಮುಂಗಮ್ ನೇತೃತ್ವದ ತಂಡ ಬಂಧಿಸಿದೆ.

ಆರೋಪಿ ಮುಸ್ತಾಫ ಪೈಚಾರ್ ಪತ್ತೆಗೆ ಸಾರ್ವಜನಿಕರಿಂದ ಎನ್‌ಐಎ ಮಾಹಿತಿ ಕೋರಿತ್ತು. ಜೊತೆಗೆ ಆರೋಪಿ ಮುಸ್ತಫಾಗೆ ಲುಕ್ ಔಟ್ ನೋಟೀಸ್‌ ಹೊರಡಿಸಿದ್ದ ತನಿಖಾ ತಂಡ, ಮಾಹಿತಿ ಕೊಟ್ಟವರಿಗೆ 5 ಲಕ್ಷ ಬಹುಮಾನ ಘೋಷಿಸಿತ್ತು.

2022ರ ಜು. 26ರಂದು ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ರಾಜ್ಯದಲ್ಲೇ ತೀವ್ರ ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಎನ್‌ಐಎ ಬಂಧಿಸಿದೆ.

Exit mobile version