Site icon Kannada News-suddikshana

ದರೋಡೆ ಮಾಡಿದ್ದ ಐವರು ಆರೋಪಿಗಳ ಬಂಧನ, 10 ಲಕ್ಷ ರೂ. ಮೌಲ್ಯದ ವಸ್ತು ವಶ

SUDDIKSHANA KANNADA NEWS/ DAVANAGERE/ DATE:05-05-2023

ದಾವಣಗೆರೆ (DAVANAGERE) : ತಾಲೂಕಿನ ಬಾಡಾ ಕ್ರಾಸ್ (BADA CROSS) ಬಳಿಯ ಆವರಗೆರೆ ಕೆರೆ ರಸ್ತೆಗೆ ಕರೆಯಿಸಿಕೊಂಡು ಕಡಿಮೆ ಬೆಲೆಗೆ ಕಂಪನಿಯಿಂದ ನೇರವಾಗಿ ಚಪ್ಪಲಿಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿ ಹಣ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ವಿದ್ಯಾನಗರ (VIDYANAGARA) ಪೊಲೀಸರು ಬಂಧಿಸಿದ್ದು, 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಪಹನಹಳ್ಳಿ ಯಲ್ಲಾಪುರದ ಪ್ರವೀಣ್ ಅಲಿಯಾಸ್ ಪಿಕೆ ರಫೀಕ್ (23), ದೇವಣ್ಣ ಅಲಿಯಾಸ್ ಡುಮ್ಮ (39), ಹರಪನಹಳ್ಳಿಯ ನಗರ ನಿವಾಸಿ ಸುಭಾಷ್ (24), ವೀರೇಶ್ (23) ಹಾಗೂ ದಾವಣಗೆರೆ ಕೆ.ಟಿ.ಜೆ ನಗರದ ಎಲ್. ಸಂಜಯ್
ಅಲಿಯಾಸ್ ಸಂಜು ಬಂಧಿತ ಆರೋಪಿಗಳು. ದರೋಡೆ ಮಾಡಿದ್ದ 10,000 ರೂ. ನಗದು, 40,000 ರೂ ಮೌಲ್ಯದ 2 ಮೊಬೈಲ್‌ಗಳು, ಪರ್ಸ್, ಬ್ಯಾಗ್, ದಾಖಲಾತಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 8 ಲಕ್ಷ ರೂ. ಬೆಲೆ ಬಾಳುವ ಒಂದು ಕಾರು ,
1,50,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೇರಳದ ವೈನಾಡ್ ಜಿಲ್ಲೆಯ ರಾಶೀಕ್ ಸಿ.ಆರ್ ಮತ್ತು ಆತನ ಸ್ನೇಹಿತರಾದ ಅಭಿನೋಶನ್, ನಿಜಮುದ್ದೀನ್ ಅವರಿಗೆ ರಫೀಕ್ ಎಂಬ ಪರಿಚಯಸ್ಥ ವ್ಯಕ್ತಿ ದಾವಣಗೆರೆ ಬಾಡಾ ಕ್ರಾಸ್ ಬಳಿ ಕಡಿಮೆ ಬೆಲೆಗೆ ಕಂಪನಿಯಿಂದ ನೇರವಾಗಿ ಚಪ್ಪಲಿಗಳನ್ನು ಕೊಡಿಸುವುದಾಗಿ ಹೇಳಿದ್ದಾನೆ. ಅದರಂತೆ ದಾವಣಗೆರೆ (DAVANAGERE) ಬಾಡಾ ಕ್ರಾಸ್ (BADA CROSS) ಆವರಗೆರೆ ಕೆರೆ ರಸ್ತೆಗೆ ಕರೆಯಿಸಿಕೊಂಡು ರಫೀಕ್ ಮತ್ತು ಆತನ ಐವರು ಸಹಚರರು ಹಲ್ಲೆ ನಡೆಸಿ ಅವರ ಬಳಿಯಲ್ಲಿದ್ದ 57 ಸಾವಿರ ರೂಪಾಯಿ ನಗದು, ಮೂರು ಮೊಬೈಲ್, ಪರ್ಸ್, ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ (POLICE)  ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿರವರ ನಿರ್ದೇಶನದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ, ಸಂಚಾರಿ ವೃತ್ತದ ಪೊಲೀಸ್ ಇನ್ ಸ್ಪೆಕ್ಟರ್ ಆರ್. ಪಿ. ಅನಿಲ್ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್‌ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

Exit mobile version