Site icon Kannada News-suddikshana

ರಾಮನಗರ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಮೇನಹಳ್ಳಿ ನಾಗರಾಜ್ ನೇತೃತ್ವದಲ್ಲಿ ಅಕ್ವಾಗಾರ್ಡ್, ಊಟದ ತಟ್ಟೆಗಳ ನೀಡಿಕೆ

ರಾಮನಗರ

SUDDIKSHANA KANNADA NEWS/ DAVANAGERE/DATE:19_09_2025

ದಾವಣಗೆರೆ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನದ ಪ್ರಯುಕ್ತ 31ನೇ ವಾರ್ಡ್ ಮತ್ತು 41ನೇ ವಾರ್ಡ್ ಕಾಂಗ್ರೆಸ್ ಮುಖಂಡರು, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್, ಶೈಲಾ ನಾಗರಾಜ್ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶ್ರೀರಾಮನಗರ ಕೈಗಾರಿಕೆ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಬಿಸಿನೀರು ಮತ್ತು ತಣ್ಣೀರಿನ ಅಕ್ವಾಗಾರ್ಡ್, ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಣೆ ಮಾಡಲಾಯಿತು.

READ ALSO THIS STORY: ಹೊಸಚಿಕ್ಕನಹಳ್ಳಿ ಸರ್ಕಾರಿಶಾಲೆಗೆ ಡೆಸ್ಕ್ ವಿತರಣೆ, ಶೈಕ್ಷಣಿಕ- ಕ್ರೀಡಾ ಕ್ಷೇತ್ರಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ ಕೊಡುಗೆ ಅಪಾರ: ಗಡಿಗುಡಾಳ್ ಮಂಜುನಾಥ್

ಕಾರ್ಯಕ್ರಮದ ಉದ್ಘಾಟನೆಯನ್ನು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ನೆರವೇರಿಸಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಪಾಲಿಕೆ ಮಾಜಿ ಸದಸ್ಯೆ ಶೈಲಾ ನಾಗರಾಜ್, ಶಿರಮಗೊಂಡನಹಳ್ಳಿ ರುದ್ರೇಶ, 31ನೇ ವಾರ್ಡ್ ಅಧ್ಯಕ್ಷ ಮಾರುತಿ, 41ನೇ ವಾರ್ಡ್ ಅಧ್ಯಕ್ಷ ಶಿವಣ್ಣ, 31ನೇ ವಾರ್ಡ್ ಮಹಿಳಾ ಅಧ್ಯಕ್ಷೆ ಸಂಗೀತಾ 41ನೇ ವಾರ್ಡ್ ಮಹಿಳಾ ಅಧ್ಯಕ್ಷೆ ರೇಖಮ್ಮ, ಎಸ್ ಡಿಎಂಸಿ ಅಧ್ಯಕ್ಷ ಭರಮಣ್ಣ, 31ನೇ ವಾರ್ಡ್ ಪ್ರಧಾನ ಕಾರ್ಯದರ್ಶಿ ಹದಡಿ ವೆಂಕಟೇಶ್, ಕಾಂಗ್ರೆಸ್ ಮುಖಂಡ ಶಿವಣ್ಣ, ಹೊಟೇಲ್ ರುದ್ರೇಶ್, ಯುವ ಮುಖಂಡ ಬೀರೇಶ್ ನಾಯ್ಕ, ಮಧುಸೂದನ್, ಅಣ್ಣಪ್ಪ, ಮಾರುತಿ, ರಘು, ಮನು, ರಮೇಶ್, ಮುತ್ತು, ಗಣೇಶ, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಜರಿದ್ದರು.

ಜೆ. ಶಿವಲಿಂಗಪ್ಪ ಸ್ವಾಗತಿಸಿದರು. ಶಿಕ್ಷಕ ಎನ್. ಅಜ್ಜಯ್ಯ ನಿರೂಪಿಸಿದರು.

Exit mobile version