Site icon Kannada News-suddikshana

ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ

ಅರ್ಜಿ

SUDDIKSHANA KANNADA NEWS/ DAVANAGERE/DATE:16_09_2025

ದಾವಣಗೆರೆ: ಹೆಚ್.ಎ.ಎಲ್ ಬೆಂಗಳೂರು ಇವರು ಐ.ಟಿ.ಐ. (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಕಾಪೆರ್ಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಟೂಲ್ ಅಂಡ್ ಡೈ ಮೇಕರ್, ಪ್ರೊಗ್ರಾಮರ್ ಕಮ್ ಆಪರೇಟರ್) & (ಮೆಕ್ಯಾನಿಕ್ ರೆಫ್ರಿಜರೇಷನ್ ಅಂಡ್ ಏರ್ ಕಂಡಿಷನ್) ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

READ ALSO THIS STORY: ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಮತಾಂತರಗೊಳ್ಳಬೇಕು?: ವಿವಾದವಾಗಿಸಿತು ಸಿದ್ದರಾಮಯ್ಯ ಮಾತು!

ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 24 ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, 1ನೇ ಮಹಡಿ, ಬಿ-ಬ್ಲಾಕ್, ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು https://apprenticeshipindia.gov.in ಈ ವೆಬ್‍ಸೈಟ್‍ನಲ್ಲಿ ಅಪ್ರೆಂಟೀಸ್‍ಗಾಗಿ ನೋಂದಾಯಿಸಿ, ಕಡ್ಡಾಯವಾಗಿ
ನೋಂದಣಿ ಸಂಖ್ಯೆಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ದಾವಣಗೆರೆ ದೂ.ಸಂ::08192-259446, ಮೋಬೈಲ್ ಸಂಖ್ಯೆ:7406323294 ಸಂಪರ್ಕಿಸಬೇಕೆಂದು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

Exit mobile version