SUDDIKSHANA KANNADA NEWS/ DAVANAGERE/ DATE:27-09-2024
ದಾವಣಗೆರೆ: ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕೇಂದ್ರ ಸರ್ಕಾರದ ಕೇಂದ್ರ ಮತ್ತು ಕಲ್ಯಾಣ ಸಮಿತಿಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
18ನೇ ಲೋಕಸಭೆಯಲ್ಲಿ ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರ್ ಓಂ. ಬಿರ್ಲಾರವರು ನೇಮಕ ಮಾಡಿದ್ದಾರೆ.
ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಮಹತ್ವದ ಸಮಿತಿಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಥಾನ ಪಡೆದಿದ್ದು, ಈ ಸ್ಥಾಯಿ ಸಮಿತಿಯಲ್ಲಿ ರಾಜ್ಯಸಭೆಯ ಹತ್ತು ಸದಸ್ಯರು ಹಾಗೂ ಲೋಕಸಭೆಯ 21 ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ಈ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಪ್ರೊ. ರಾಮ್ ಗೋಪಾಲ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.