Site icon Kannada News-suddikshana

Farmer: ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ನೀಡಲು ರೈತರಿಂದ ಅರ್ಜಿ ಆಹ್ವಾನ

SUDDIKSHANA KANNADA NEWS/ DAVANAGERE/ DATE:22-08-2023

ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿ ವಿವಿಧ ಬೆಳೆಗಳಿಗೆ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ನೀಡಲು ರೈತರಿಂದ (Farmer) ಅರ್ಜಿ ಆಹ್ವಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ: 

Parrots Problem: ಘೀಳಿಟ್ಟು ಬರುತ್ತಿದೆ ಲಕ್ಷಾಂತರ ಗಿಳಿಗಳ ಹಿಂಡು: “ಈ ಪ್ರದೇಶಗಳಿಗೆ” ಬಂದು ಮೆಕ್ಕೆಜೋಳ ನಾಶಪಡಿಸುವುದ್ಯಾಕೆ..? ಕಾಳು ಕುಕ್ಕಿ ತಿನ್ನುವ ಗಿಳಿಗಳಿಂದ ಹಿಂಡುತ್ತಿದೆ ರೈತರ ಕರುಳು…!

ಕಾಳು ಮೆಣಸು, ಅಂಗಾಂಶ ಬಾಳೆ, ತರಕಾರಿ, ಹೂವುಗಳು ಹೊಸ ಪ್ರದೇಶ ವಿಸ್ತರಣೆ, ಕೃಷಿ ಹೊಂಡ, ಪ್ಯಾಕ್ ಹೌಸ್, ಪಾಲಿಹೌಸ್, ಬೆಳೆಗಳಾದ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆ.23 ಕೊನೆಯದಿನವಾಗಿರುತ್ತದೆ. ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ ತಿಳಿಸಿದ್ದಾರೆ.

Exit mobile version