Site icon Kannada News-suddikshana

ಮತ್ಸ್ಯ ಸಂಪದ-ನೀಲಿಕ್ರಾಂತಿ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

SUDDIKSHANA KANNADA NEWS/ DAVANAGERE/ DATE:21-10-2024

ಬೆಂಗಳೂರು: ಮೀನುಗಾರಿಕೆ ಇಲಾಖೆ ವತಿಯಿಂದ 2022-23 ರಿಂದ 2024-25 ನೇ ಸಾಲಿನವರೆಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿಕೊಳಗಳ ನಿರ್ಮಾಣ ಒಟ್ಟು 4.90 ಹೆಕ್ಟೇರ್ ಪ್ರದೇಶಕ್ಕೆ ಸಾಮಾನ್ಯ 3.10 ಹೆ. ಮತ್ತು ಪರಿಶಿಷ್ಟ ಜಾತಿಗೆ 1.80 ಹೆಕ್ಟೇರ್. ಮೀನು ಕೃಷಿ ಕೊಳ ನಿರ್ಮಾಣ ಮಾಡಿ ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ ಒಟ್ಟು 8.60 ಹೆಕ್ಟೇರ್‌ರಲ್ಲಿ ಸಾಮಾನ್ಯ 4.80 ಹೆ., ಸಾಮಾನ್ಯ ಮಹಿಳೆ1.80 ಹೆ., ಪರಿಶಿಷ್ಟ ಜಾತಿ 1.00 ಹೆ. ಮತ್ತು ಪರಿಶಿಷ್ಟ ಪಂಗಡ 1.00 ಹೆಕ್ಟೇರ್.

ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಘಟಕದಡಿ ಸಾಂಪ್ರದಾಯಿಕ ಮೀನುಗಾರರಿಗೆ ಎಫ್‌ಆರ್‌ಪಿ ಬದಲಿ ದೋಣಿ ನಿರ್ಮಾಣಕ್ಕಾಗಿ ಸಹಾಯ -01 ಘಟಕ, ಸಾಮಾನ್ಯ 01 ಘಟಕ. ಮೀನುಗಾರಿಕೆ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ ಒಟ್ಟು 6.02 ಹೆಕ್ಟೇರ್ ಸಾಮಾನ್ಯ 2.08 ಹೆಕ್ಟೇರ್, ಮಹಿಳೆ 1.84 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 2.10 ಹೆಕ್ಟೇರ್. ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 1 ಗುರಿ ನೀಡಲಾಗಿದೆ.

ಅಲಂಕಾರಿಕಾ ಮೀನುಮಾರಾಟ ಮಳಿಗೆ ಸೇರಿದಂತೆ ಹೊಸತಾದ ಮೀನು ಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಪರಿಶಿಷ್ಟ ಜಾತಿ 01 ಘಟಕ. ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.

ಆಸಕ್ತರು ನ. 5 ರೊಳಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಲೊಂದಿಗೆ ಸಲ್ಲಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Exit mobile version