Site icon Kannada News-suddikshana

ಮೇವು ಕತ್ತರಿಸುವ ಯಂತ್ರಗಳು ಹಾಗೂ ರಬ್ಬರ್ ನೆಲ ಹಾಸುಗಳಿಗೆ ಅರ್ಜಿ: ಶೇ.50ರಷ್ಟು ಸಹಾಯಧನ

ಅರ್ಜಿ

SUDDIKSHANA KANNADA NEWS/ DAVANAGERE/DATE:24_09_2025

ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ 2 ಹೆಚ್.ಪಿ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳು ಹಾಗೂ ರಬ್ಬರ್ ನೆಲ ಹಾಸುಗಳು ನಿಗದಿತ ದರದಲ್ಲಿ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ಹಾಗೂ ಫಲಾನುಭವಿ ವಂತಿಗೆ ಶೇ.50 ರಂತೆ ಲಭ್ಯವಿರುತ್ತದೆ. ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

READ ALSO THIS STORY: ಮತ್ತೆ ಕುತಂತ್ರಿಗಳ ಕಪಟ ಮುಖವಾಡ ಬಟಾಬಯಲು: ಭಾರತದ ವಿರುದ್ಧ ಮಂಡಿಯೂರಿದ್ದ ಪಾಕಿಸ್ತಾನದ ಪಠ್ಯಕ್ರಮದಲ್ಲಿ ಸುಳ್ಳುಗಳ ಸರಮಾಲೆ!

ಆಸಕ್ತ ರೈತರು ತಮ್ಮ ತಾಲ್ಲೂಕಿನ ಪಶು ಆಸ್ಪತ್ರೆಗೆ ಭೇಟಿ ನೀಡಿ ನಿಗದಿತ ಅರ್ಜಿಯಲ್ಲಿ ಮಾಹಿತಿಯನ್ನು ಭರ್ತಿಮಾಡಿ ಅಕ್ಟೋಬರ್ 15 ರೊಳಗಾಗಿ ಸಲ್ಲಿಸಬೇಕೆಂದು ಪಶುಪಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Exit mobile version