Home ದಾವಣಗೆರೆ ದಾವಣಗೆರೆಯ ಸಿದ್ಧಗಂಗಾದಲ್ಲಿ ಇಂದು ಇನ್ನೊಂದು ಶಿಕ್ಷಣ “ಸಂಭ್ರಮ”
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯ ಸಿದ್ಧಗಂಗಾದಲ್ಲಿ ಇಂದು ಇನ್ನೊಂದು ಶಿಕ್ಷಣ “ಸಂಭ್ರಮ”

Share
Share

SUDDIKSHANA KANNADA NEWS/DAVANAGERE/DATE:21_12_2025

ದಾವಣಗೆರೆ: ಕಳೆದ ಐದು ದಶಕಗಳಲ್ಲಿ ದಾವಣಗೆರೆ ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, “ವಿದ್ಯಾಕಾಶಿ” ಎನ್ನುವ ಅಭಿದಾನಕ್ಕೆ ಒಳಗಾಗಿದೆ. ರಾಜ್ಯವೇ ಹೆಮ್ಮೆ ಪಡುವಂತಹ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ವಿದ್ಯಾರ್ಥಿಗಳನ್ನು ನಾಡಿನ ಎಲ್ಲೆಡೆಯಿಂದ ಆಕರ್ಷಿಸುತ್ತಿವೆ. ಇಂತಹ ನಗರದ ಹೆಮ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯೂ ವಿಶೇಷವಾಗಿ ಉಲ್ಲೇಖಿಸುವಂತಹುದಾಗಿದೆ. 1970 ರಲ್ಲಿ ಸ್ಥಾಪನೆಯಾಗಿ, ಈವರೆಗೆ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ದಾಖಲೆ ಈ ಸಂಸ್ಥೆಯದು.

ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಆರ್ಶೀವಾದದಿಂದ ಅರಳಿದ ಈ ಸಂಸ್ಥೆಯ ಸ್ಥಾಪಕರಾದ ಎಂ.ಎಸ್‌ ಶಿವಣ್ಣನವರ ಸದಾಶಯಗಳನ್ನು, ಕನಸುಗಳನ್ನು ನನಸಾಗಿಸುವಲ್ಲಿ ಸಫಲತೆಯನ್ನು ಕಂಡಿರುವುದು ಸತ್ಯಸ್ಯ ಸತ್ಯ.

ಈ ಶಿಕ್ಷಣ ಸಂಸ್ಥೆ ಇಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸೆಲ್ಫ್‌ ಅಸೆಸ್‌ಮೆಂಟ್‌ ಟೆಸ್ಟ್‌ ನ ಪರಿಕಲ್ಪನೆಯು ವಿಶೇಷವಾದುದು ಎನ್ನಬಹುದು. ಅತ್ಯಂತ ಅಚ್ಚುಕಟ್ಟಾಗಿ ಅಯೋಜಿಸಿರುವ ಈ ಟೆಸ್ಟ್‌ ನಗರದ ಹಾಗು ಸುತ್ತಲಿನ ಗ್ರಾಮೀಣ ಭಾಗಗಳ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಈ ಟೆಸ್ಟ್‌ ನಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವುದು ನಿಜ. ಪಿಯುಸಿ ಅತ್ಯಂತ ಮುಖ್ಯ ಹಾಗು ತಿರುವಿನ ಶೈಕ್ಷಣಿಕ ಘಟ್ಟವೆಂದು ವಿವರಿಸಿದ ಜಸ್ಟಿನ್‌ ಡಿʼಸೌಜರವರು, ಹೆಚ್ಚಿನ ಅಂಕಗಳಿಸುವತ್ತ ವಿದ್ಯಾರ್ಥಿಗಳ ಮನವೊಲಿಸಿದರು.

ತಮ್ಮ ಶಿಕ್ಷಣ ಸಂಸ್ಥೆಯ ಎಂಎಸ್‌ಎಸ್ ಕ್ವಿಜ್‌ ಮತ್ತು ಎಂಎಸ್‌ಎಸ್ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ತಿಳಿಸಿ, ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆ ನೀಡುವ ವಿದ್ಯಾರ್ಥಿ ವೇತನ ಹಾಗೂ ಅರ್ಹರಿಗೆ ನೀಡುವ ಉಚಿತ ವಿದ್ಯಾಭ್ಯಾಸದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ, ಟೆಸ್ಟ್‌ ಗೆ ಪೂರ್ವಬಾವಿಯಾಗಿ ನಡೆದ ಸಭೆಯಲ್ಲಿ ವಿವರಿಸಿದರು.

50 ಅಂಕಗಳ 1 ಗಂಟೆ ಅವಧಿಯ ಈ ಟೆಸ್ಟ್‌ ನ ಫಲಿತಾಂಶವನ್ನು ಒಂದು ವಾರದ ಒಳಗೆ ವಿದ್ಯಾರ್ಥಿಗಳಿಗೆ ಅವರ ಮೊಬೈಲ್‌ ಸಂಖ್ಯೆಗೆ ನೇರವಾಗಿ ಕಳಿಸಲಾಗುವುದು ಎಂದವರು ತಿಳಿಸಿದರು.

ಈ ಟೆಸ್ಟ್‌ ನ ಕಾರ್ಯಕ್ರಮಕ್ಕೆ ಈಗ ಇಲ್ಲಿ ಅಧ್ಯಯನ ನಡೆಸುತ್ತಿರುವ ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ತಮ್ಮ ಸೌಜನ್ಯದ ನಡೆಯಿಂದ ಪೋಷಕರ ಮನಗೆದ್ದರು. ಎಲ್ಲಾ ದೃಷ್ಠಿಯಿಂದ ಇದೊಂದು ವಿನೂತನವಾದ ಕಾರ್ಯಕ್ರಮವಲ್ಲದೆ, ಮಾದರಿಯಾದ ಕಾರ್ಯಕ್ರಮವೂ ಹೌದು.

ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದ್ದು ಇನ್ನೊಂದು ವಿಶೇಷ. ಈ ಪ್ರಶ್ನೆಪತ್ರಿಕೆಯ ಪ್ರಯೋಜನವನ್ನು ನೀವೂ ಪಡೆಯಿರಿ. ನಿಮ್ಮ ಸ್ನೇಹಿತರನ್ನು ಪಡೆಯಲು ಪ್ರೋತ್ಸಾಹಿಸಿ ಎಂದು ಹಾರೈಸಿದ್ದು ಮನನೀಯ.

ಈ ಟೆಸ್ಟ್‌ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ಸಂಸ್ಥೆಯ ಆವರಣಕ್ಕೆ ಕರೆತಂದ ಪೋಷಕರಿಗೆ ಭೋಜನ ವ್ಯವಸ್ಥೆ ಮಾಡಿದ್ದು ನನ್ನ ಮಟ್ಟಿಗೆ ಒಂದು ಹೊಸ ಅನುಭವ. 

– ಕೆ.ಎನ್‌ ಜಯಪ್ರಕಾಶ್‌, ಪೋಷಕರು

Share

Leave a comment

Leave a Reply

Your email address will not be published. Required fields are marked *