ಬೆಂಗಳೂರು: ನಿಮ್ಮ ಕೆಟ್ಟ ಕಾಮೆಂಟ್ ಗಳ ಕಾರಣದಿಂದಲೇ ಬಹಳಷ್ಟು ರಾಜಕಾರಣಿಗಳು ತಮ್ಮ ವೈಯಕ್ತಿಕ ಜೀವನವನ್ನು ಪಾರದರ್ಶಕವಾಗಿಡಲು ಅಥವಾ ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಅಪ್ಡೇಟ್ಸ್ ಹಾಕಲು ಹಿಂಜರಿಯುತ್ತಾರೆ ಎಂದು ಶಾಸಕಿ ನಯನ ಮೋಟಮ್ಮ ಕಿಡಿಕಾರಿದ್ದಾರೆ.
ನಿಮ್ಮ ಮನಸ್ಸು ಎಷ್ಟು ವಿಶಾಲವಾಗುತ್ತೋ ಅಷ್ಟು ರಾಜಕಾರಣಿಗಳ ಸ್ವಾತಂತ್ರ್ಯದ ಬದುಕನ್ನು ನೀವು ಕಾಣಲು ಸಾಧ್ಯ ಎಂದು ಹೇಳಿದ್ದಾರೆ.
ಸದ್ಯ ಇರುವ ಬರೀ 11 ಮಹಿಳಾ ಶಾಸಕರ ಪೈಕಿ ತೆರೆದ ಪುಸ್ತಕದಂತಹ ಜೀವನ ನನ್ನ ಆಯ್ಕೆ. ಅದು ತಪ್ಪಲ್ಲ. ಯಾಕೆ? ಪ್ರತಿ ರಾಜಕಾರಣಿಗೂ ವೈಯಕ್ತಿಕ ಜೀವನ ಇದೆ ಅನ್ನೋದನ್ನ ಅರಗಿಸಿಕೊಳ್ಳೋಕೆ ನಿಮಗೆ ಸಾಧ್ಯ ಆಗ್ತಿಲ್ವಾ? ಎಂದು ಪ್ರಶ್ನಿಸಿರುವ ಅಶ್ಲೀಲ ಸಂದೇಶಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.





Leave a comment