Site icon Kannada News-suddikshana

ಅಮೆರಿಕ: ನಕಲಿ ಕ್ಯಾನ್ಸರ್ ಔಷಧಿ ಮಾರಾಟ- ಭಾರತೀಯ ಮೂಲದ ವ್ಯಕ್ತಿಯ ಬಂಧನ

ಅಮೇರಿಕಾ: ನಕಲಿ ಕ್ಯಾನ್ಸರ್ ಔಷಧಿಗಳ ಮಾರಾಟ ಮತ್ತು ಕಳ್ಳಸಾಗಾಣಿಕೆಯ ಆರೋಪದ ಮೇಲೆ ಬಿಹಾರ ಮೂಲದ ವ್ಯಕ್ತಿಯನ್ನು ಅಮೆರಿಕದಲ್ಲಿ ಬಂಧಿಸಿರುವುದು ಬೆಳಕಿಗೆ ಬಂದಿದೆ.

ಸಂಜಯ್ ಕುಮಾರ್ (43) ಅಮೆರಿಕಕ್ಕೆ ಸಾವಿರಾರು ಡಾಲರ್ ಮೌಲ್ಯದ ನಕಲಿ ಔಷಧಗಳನ್ನು ಮಾರಾಟ ಮತ್ತು ಕಳ್ಳಸಾಗಣೆ ಮಾಡಿದ ಆರೋಪ ಹೊತ್ತಿದ್ದಾರೆ.ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಸಂಜಯ್ ಮತ್ತು ತಂಡ ಅಮೆರಿಕಕ್ಕೆ ನಕಲಿ ಕ್ಯಾನ್ಸರ್ ಔಷಧಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಕೀಟ್ರುಡಾ ಒಂದು ಕ್ಯಾನ್ಸರ್ ಇಮ್ಯುನೊಥೆರಪಿಯಾಗಿದ್ದು, ಇದನ್ನು 19 ವಿಧದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದರ ತಯಾರಿಕೆ ಮತ್ತು ವಿತರಣೆಯನ್ನು ಮೆರ್ಕ್ ಶಾರ್ಪ್ ಮತ್ತು ಡೊಹ್ಮೆ ಎಲ್ಎಲ್ ಸಿ ಮೂಲಕ ಮಾತ್ರ ಮಾಡಬಹುದಾಗಿದೆ.

ಸಂಜಯ್ ಅವರನ್ನು ಜೂನ್ 26 ರಂದು ಹೂಸ್ಟನ್‌ನಲ್ಲಿ ಬಂಧಿಸಲಾಗಿದೆ. ಸಂಜಯ್ ಕುಮಾರ್ ವಿರುದ್ಧ ನಕಲಿ ಕ್ಯಾನ್ಸರ್ ಔಷಧಿಗಳ ಮಾರಾಟ ಮತ್ತು ಕಳ್ಳಸಾಗಾಣಿಕೆಯ ಆರೋಪವಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ, ಅವರು ಪ್ರತಿ ಅಪರಾಧಕ್ಕೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

Exit mobile version