ದಾವಣಗೆರೆ: ಈಗಿನ ಹುಡುಗ್ರು ಗೊತ್ತಲ್ವಾ. ನಾವು ಜಾಸ್ತಿನೇ ಮಾತನಾಡುವ ಹಂಗಿಲ್ಲ. ಚುನಾವಣೆ ದಿನಾಂಕ ಘೋಷಣೆಯಾಗಲಿ, ಆಮೇಲೆ ಮಾತನಾಡೋಣ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತನ್ನ ಪುತ್ರ ಸಮರ್ಥ್ ಶಾಮನೂರು ಸ್ಪರ್ಧೆ ಕುರಿತಂತೆ ಹೇಳಿದ್ದಾರೆ.
“ಈಗಿನ ಹುಡುಗರು ಕೇಳಲ್ಲ!”
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರ ಸಮರ್ಥ್ ಶಾಮನೂರು ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮಾತು ಆಡಿರುವುದು ಕುತೂಹಲ ಕೆರಳಿಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಮೊದಲು ದಿನಾಂಕ ಘೋಷಣೆ ಆಗಲಿ. ಆಮೇಲೆ ಈ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿದರು.
ಕುಟುಂಬದ ಚರ್ಚೆಯೇ ಅಂತಿಮ
ಸಮರ್ಥ್ ಶಾಮನೂರು ಸ್ಪರ್ಧೆ ಬಗ್ಗೆ ನಾವು ಫ್ಯಾಮಿಲಿಯಲ್ಲಿ ಮೊದಲು ಮಾತನಾಡಬೇಕು. ಅವನ ಅಭಿಪ್ರಾಯ ತಿಳಿದುಕೊಳ್ಳಬೇಕು. ಏನು ಹೆಂಗೆ ಅನ್ನೋದರ ಬಗ್ಗೆ ಚರ್ಚೆಯಾಗಬೇಕು. ಈಗಲೇ ಹೇಳಲು ಆಗದು ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಚುನಾವಣೆ ದಿನಾಂಕದ ನಿರೀಕ್ಷೆ
ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಸಂಸತ್ ಪ್ರವೇಶಿಸಿದರು. ಹಾಗಾಗಿ, ಸಮರ್ಥ್ ಅವರು ರಾಜಕಾರಣಕ್ಕೆ ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ
ಪ್ರತಿಕ್ರಿಯೆ ನೀಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ ಚರ್ಚೆ ಮಾಡುವ ಸೂಕ್ತ ಸಮಯ ಇದಲ್ಲ. ಬಂದಾಗ ಮಾತನಾಡೋಣ ಎಂದು ತಿಳಿಸಿದರು.
- Congress Candidate Samarth Shamanur
- Davanagere District In-charge Minister.
- Davanagere South Bypoll
- Karnataka Politics
- Samarth Shamanur
- Samarth Shamanur election entry
- Shamanur Shivashankarappa family
- SS Mallikarjun
- ಉಪಚುನಾವಣೆ 2026
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್
- ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಶಾಮನೂರು ಶಿವಶಂಕರಪ್ಪ ಕುಟುಂಬ
- ಸಮರ್ಥ್ ಶಾಮನೂರು





Leave a comment