Site icon Kannada News-suddikshana

ಪುಷ್ಪ 2 ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ನಲ್ಲಿ ಕಾಲ್ತುಳಿತ, ಮಹಿಳೆ ಸಾವು: ಮೌನ ಮುರಿದ ಅಲ್ಲು ಅರ್ಜುನ್! 25 ಲಕ್ಷ ರೂ. ಘೋಷಣೆ

SUDDIKSHANA KANNADA NEWS/ DAVANAGERE/ DATE:07-12-2024

ಹೈದರಾಬಾದ್‌: ವಿಶ್ವದಾದ್ಯಂತ ಪುಷ್ಪ-2 ಸಿನಿಮಾ ತೆರೆ ಮೇಲೆ ಅಬ್ಬರಿಸುತ್ತಿದೆ. ನಟ ಅಲ್ಲು ಅರ್ಜುನ್ ನಟನೆಗೆ ಫಿದಾ ಆಗಿದ್ದಾರೆ. ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ಪುಷ್ಪ 2 ಕ್ರೇಜ್ ಜೋರಾಗಿದೆ.

ಟಿಕೆಟ್ ಪಡೆದು ಸಿನಿಮಾ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳು ಜನರಿಂದ ತುಂಬಿ ತುಳುಕುತ್ತಿವೆ. ನೂರಾರು ಕೋಟಿ ರೂಪಾಯಿ ಗೆಲ್ಲಾಪೆಟ್ಟಿಗೆಯಲ್ಲಿ ಪುಷ್ಪ-2 ಗಳಿಸಿದ್ದು, ಅಲ್ಲು ಅರ್ಜುನ್ ಮತ್ತೊಂದು ಹಿಟ್ ಸಿನಿಮಾ. ಪುಷ್ಪ ಮೊದಲ ಚಿತ್ರಕ್ಕಿಂತ ಪುಷ್ಪ2 ಸಾಕಷ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲು ಅರ್ಜುನ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತೆರೆ ಮೇಲೆ ಅಲ್ಲು ಅರ್ಜುನ್ ನಟನೆ ಕಂಡು ಖುಷಿಪಟ್ಟು ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದ ಕುರಿತು ಅಲ್ಲು ಅರ್ಜುನ್ ಮೌನ ಮುರಿದಿದ್ದಾರೆ. 39 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಕ್ಕೆ ಸಂತಾಪ ಸೂಚಿಸಿದ್ದಾರೆ. ಆಕೆಯ ಕುಟುಂಬಕ್ಕೆ 25 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯ ಪುತ್ರ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಪುಷ್ಪ 2: ದಿ ರೂಲ್ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

Exit mobile version