Site icon Kannada News-suddikshana

ಖಡಕ್ ಲುಕ್ ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್; ಏನಿದು ಹೊಸ ಮಾಸ್ ಅವತಾರ?

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮಾಸ್ ಅವತಾರ ತಾಳಿದ್ದು, ಸದ್ಯ ಸಿನಿಮಾದಲ್ಲಿನ ಅವರ ಈ ಖಡಕ್ ಲುಕ್ ರಿವೀಲ್ ಆಗಿದೆ.

ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯುಸಿಯಾಗಿರುವ ನಟಿ ಆಲಿಯಾ ಭಟ್, ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಿದ್ದು, ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಜಿಗ್ರಾ’ ಸಿನಿಮಾದ ಮೂಲಕ ಆಲಿಯಾ ಭಟ್ ಮತ್ತೊಮ್ಮೆ ತೆರೆ ಮೆಲೆ ಬರಲು ಸಿದ್ಧರಾಗಿದ್ದಾರೆ.

ಇದೀಗ ಈ ಸಿನಿಮಾದ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ನಟಿ ಆಲಿಯಾ ಮುಷ್ಠಿ ಬಿಗಿ ಹಿಡಿದು ಖಡಕ್ ಆಗಿ ಫೋಸ್ ಕೊಟ್ಟಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ
ಜಿಗ್ರಾ’ ಚಿತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಚಿತ್ರದಲ್ಲಿ ನಟ ವೇದಾಂಗ್ ರೈನಾಗೆ ಸಹೋದರಿಯಾಗಿ ಆಲಿಯಾ ನಟಿಸಿದ್ದಾರೆ. ಸೆಪ್ಟೆಂಬರ್ 8ರಂದು ‘ಜಿಗ್ರಾ’ ಟ್ರೈಲರ್ ರಿಲೀಸ್ ಆಗೋದಾಗಿ ನಟಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ.

Exit mobile version