Home ದಾವಣಗೆರೆ ಡಿಸಿಎಂ ಡಿ. ಕೆ. ಶಿವಕುಮಾರ್ ಗೆ ಇದೆಯಂತೆ ಅಖಂಡ ಸಾಮ್ರಾಜ್ಯ ಯೋಗ: ಈ ಭವಿಷ್ಯ ನುಡಿದವರು ಯಾರು?
ದಾವಣಗೆರೆನವದೆಹಲಿಬೆಂಗಳೂರು

ಡಿಸಿಎಂ ಡಿ. ಕೆ. ಶಿವಕುಮಾರ್ ಗೆ ಇದೆಯಂತೆ ಅಖಂಡ ಸಾಮ್ರಾಜ್ಯ ಯೋಗ: ಈ ಭವಿಷ್ಯ ನುಡಿದವರು ಯಾರು?

Share
ಡಿ. ಕೆ. ಶಿವಕುಮಾರ್
Share

ದಾವಣಗೆರೆ: ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಇದೆಯಂತೆ ಅಖಂಡ ಸಾಮ್ರಾಜ್ಯ ಯೋಗ. ಈ ಭವಿಷ್ಯ ನುಡಿದವರು ಯಾರು ಗೊತ್ತಾ ಎನ್ನೋದು ಸ್ಪೆಷಲ್.

ಡಿ. ಕೆ. ಶಿವಕುಮಾರ್

ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಅಖಂಡ ಸಾಮ್ರಾಜ್ಯ ಯೋಗವಿದೆ ಎಂದು ಪಂಡಿತ್ ಶಾಮನೂರು ಮುರುಗೇಶ್ ಭವಿಷ್ಯ ನುಡಿದಿದ್ದಾರೆ.

READ ALSO THIS STORY: ದಾವಣಗೆರೆ ಡಿಸಿ ಆಗಿದ್ದ ಮಹಾಂತೇಶ್ ಬೀಳಗಿ, ಸಹೋದರ ಶಂಕರ ಬೀಳಗಿ ಸೇರಿ ಮೂವರ ಸಾವು: ಐಎಎಸ್ ಅಧಿಕಾರಿ ಕುರಿತ ಡೀಟೈಲ್ಸ್

ರಾಹು, ಕೇತುಗಳ ಯೋಗದ ಪ್ರಭಾವದಿಂದ ಬಹುಪಾಲು ಶಾಸಕರು ಡಿಕೆಶಿಕ್ಕೆ ಬೆಂಬಲ ನಿಲ್ಲುವ ಸಂಭವವಿದ್ದು ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದಿದ್ದಾರೆ.

ಸಿಂಹ ಲಗ್ನಕ್ಕೆ ರಾಜೋಕಾರಕ ಕುಜನು ಪ್ರಚಾರಕಾರಕ ಮನೆಯಲ್ಲಿ ನೀಚನಾಗಿ ಇರುವುದರಿಂದ ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ ಈ ಸರ್ಕಾರಕ್ಕೆ ಪ್ರಜೆಗಳಿಂದ ಒಳ್ಳೆಯ ವಿಶ್ವಾಸವಿರುವುದಿಲ್ಲ. ಹಿತಶತ್ರುಗಳು ನಿಮ್ಮನ್ನು ಪೀಡಿಸಬಲ್ಲರು, ಇತರರ ನೆರವನ್ನು ಅವಲಂಬಿಸಬೇಕಾಗುತ್ತದೆ. ಮನಕಾರಕ ರವಿಯಿಂದ ಸಚಿವ ಸಂಪುಟದ ಸಚಿವರ ವೈಮನಸ್ಸಿನಿಂದಾಗಿ ಮುಖ್ಯಮಂತ್ರಿಗಳಿಗೆ ಪ್ರಜೆಗಳಿಂದ ದಷ್ಪಾರಿಣಾಮ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *