Site icon Kannada News-suddikshana

ಜ.29ರಿಂದ ಭಾರತೀಯ ವಾಯುಪಡೆಯಲ್ಲಿನ ಏರ್ ಮ್ಯಾನ್ ಗ್ರೂಪ್ ನೇಮಕಾತಿಗೆ ರ್ಯಾಲಿ

SUDDIKSHANA KANNADA NEWS/ DAVANAGERE/ DATE:21-01-2025

ದಾವಣಗೆರೆ: ಭಾರತೀಯ ವಾಯುಪಡೆಯಲ್ಲಿನ ಏರ್‍ಮ್ಯಾನ್ ಗ್ರೂಪ್ ವೈ ತಾಂತ್ರಿಕವಲ್ಲದ ಹಾಗೂ ವೈದ್ಯಕೀಯ ಸಹಾಯಕ ವೃತ್ತಿಗೆ ನೇಮಕಾತಿ ರ್ಯಾಲಿಯನ್ನು ಕೇರಳದ ಕೊಚ್ಚಿಯ ಎರ್ನಾಕುಲಂನಲ್ಲಿನ ಶೆಣೈಸ್, ಪಿಟಿ ಉಷಾ ರಸ್ತೆಯಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ಏರ್ಪಡಿಸಲಾಗಿದೆ.

ವೈದ್ಯಕೀಯ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿ 2004 ರ ಜುಲೈ 3 ರಿಂದ 2008 ರ ಜುಲೈ 3 ರೊಳಗೆ ಜನಿಸಿರಬೇಕು. ವೈದ್ಯಕೀಯ ಸಹಾಯಕ ಹುದ್ದೆಗೆ ಫಾರ್ಮಸಿಯಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. 2001 ರ ಜುಲೈ 3 ರಿಂದ 2006 ರ ಜುಲೈ 3 ರೊಳಗೆ ಜನಿಸಿರಬೇಕು. ಮಾಹಿತಿಗಾಗಿ ವೆಬ್‍ಸೈಟ್ www.airmenselection.cda.in ಗೆ ಭೇಟಿನೀಡಿ ಮಾಹಿತಿ ಪಡೆಯಬಹುದು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ ದೂ.ಸಂ: 08192-259446 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

Exit mobile version