SUDDIKSHANA KANNADA NEWS/ DAVANAGERE/ DATE-13-06-2025
ಅಹಮದಾಬಾದ್: ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹೊರಟಿದ್ದ ದಂಪತಿ ಸೇರಿದಂತೆ ಮಕ್ಕಳೂ ಏರ್ ಇಂಡಿಯಾ ವಿಮಾನಾಘಾತದಲ್ಲಿ ಅಸುನೀಗಿದ್ದಾರೆ. ಈ ಫ್ಯಾಮಿಲಿಯು ಘೋರ ದುರಂತದಲ್ಲಿ ಮಡಿದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಏರ್ ಇಂಡಿಯಾ ವಿಮಾನವು ಲಂಡನ್ ಗೆ ಹೋಗುತ್ತಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಐದೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.
ಇಬ್ಬರು ಪೈಲಟ್ ಗಳು ಸೇರಿದಂತೆ ವಿಮಾನದಲ್ಲಿ ಒಟ್ಟು 12 ಸಿಬ್ಬಂದಿ ಇದ್ದರು. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆದ ಸ್ವಲ್ಪ
ವೇಳೆಯಲ್ಲೇ ವಿಮಾನ ಅಪ್ಪಳಿಸಿ, ಹೊತ್ತಿ ಉರಿಯಿತು. ವಿಮಾನದಲ್ಲಿದ್ದ ಒಬ್ಬರನ್ನು ಬಿಟ್ಟರೆ ಎಲ್ಲರೂ ಸಾವು ಕಂಡಿದ್ದಾರೆ.
ಬನ್ಸ್ವಾರಾ ನಿವಾಸಿ ಪ್ರತೀಕ್ ಜೋಶಿ ತಮ್ಮ ಕುಟುಂಬದೊಂದಿಗೆ ವಿಮಾನದಲ್ಲಿ ಲಂಡನ್ ಗೆ ಹೋಗುತ್ತಿದ್ದರು. ಪ್ರತೀಕ್ ಜೋಶಿ ಸುಮಾರು ಆರು ವರ್ಷಗಳ ಹಿಂದೆ ಲಂಡನ್‌ನಲ್ಲೇ ನೆಲೆಸಿದ್ದರು. ತನ್ನ ಪತ್ನಿ ಮತ್ತು ಮೂವರು
ಮಕ್ಕಳೊಂದಿಗೆ ಅಲ್ಲಿ ನೆಲೆಸಲು ಯೋಜನೆ ಹಾಕಿಕೊಂಡಿದ್ದರು.
ವೈದ್ಯೆಯಾಗಿದ್ದ ಪ್ರತೀಕ್ ಜೋಶಿ ಅವರ ಪತ್ನಿ ಕೇವಲ 2 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಗುಡ್ ಬೈ ಹೇಳಿದ್ದರು. ಕೆಲಸಕ್ಕೆ ರಾಜೀನಾಮೆ ನೀಡಿ ಕುಟುಂಬಕ್ಕೆ ಇಬ್ಬರು ಅವಳಿ ಹೆಣ್ಣುಮಕ್ಕಳು ಸೇರಿದಂತೆ ಮೂವರು ಮಕ್ಕಳೊಂದಿಗೆ ಲಂಡನ್ ನಲ್ಲಿ ನೆಲೆಸಲು ಗಂಡನೊಂದಿಗೆ ಹೊರಟಿದ್ದರು. ಆದ್ರೆ, ವಿಮಾನ ಅಪಘಾತದಲ್ಲಿ ಇಡೀ ಕುಟುಂಬವೇ ನಾಶವಾದಂತಾಗಿದೆ.
ಪತ್ನಿ, ಮಕ್ಕಳ ಜೊತೆ ಲಂಡನ್ ನಲ್ಲೇ ಪ್ರತೀಕ್ ಜೋಷಿ ಕನಸು ಕಂಡಿದ್ದರು. ಆದ್ರೆ, ವಿಮಾನ ಹತ್ತಿದ ಕೇವಲ ಹತ್ತು ನಿಮಿಷಗಳಲ್ಲೇ ವಿಧಿಯಾಟ ಬೇರೆಯಾಗಿತ್ತು. ಸಂಭ್ರಮದಿಂದ ಹೊರಟಿದ್ದ ಕುಟುಂಬವು ಅಸುನೀಗಿದೆ.