SUDDIKSHANA KANNADA NEWS/DAVANAGERE/DATE:24_11_2025
ದಾವಣಗೆರೆ: ದಾವಣಗೆರೆ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ವೋಲ್ವೋ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಕಲ್ಪಿಸಲಾಗಿದೆ.
READ ASLO THIS STORY: ಶಾಮನೂರು ಶಿವಶಂಕರಪ್ಪರು ಆರಾಮಾಗಿದ್ದಾರೆ, ಆರೋಗ್ಯದ ಬಗ್ಗೆ ಆತಂಕ ಬೇಡ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ
ಈ ಮಾರ್ಗದ ಚಾಲನೆಯನ್ನು ನವಂಬರ್ 25 ರಂದು ಮಧ್ಯಾಹ್ನ 5 ಗಂಟೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಮಾರ್ಗದ ವಿವರ: ರಾತ್ರಿ 7 ಗಂಟೆಗೆ ದಾವಣಗೆರೆಯಿಂದ ಹೊರಟು ಚಿತ್ರದುರ್ಗ, ಬಳ್ಳಾರಿ ಮೂಲಕ ಮಂತ್ರಾಲಯ ತಲುಪಲಿದೆ. ಬೆಳಿಗ್ಗೆ 11 ಗಂಟೆಗೆ ಮಂತ್ರಾಲಯದಿಂದ ಬಳ್ಳಾರಿ, ಚಿತ್ರದುರ್ಗ ಮೂಲಕ ದಾವಣಗೆರೆ ತಲುಪಲಿದೆ.
ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಬುಕ್ಕಿಂಗ್ ಸೌಕರ್ಯ ಕಲ್ಪಿಸಲಾಗಿದೆ. ವೆಬ್ ಸೈಟ್ ksrtc.karnataka.gov.in ಬುಕ್ಕಿಂಗ್ ಪಡೆಯಬಹುದು ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್ ಶಿವಕುಮಾರಯ್ಯ ತಿಳಿಸಿದ್ದಾರೆ.






Leave a comment