ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನರ್ಸಿಂಗ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ NORCET 10 (ನರ್ಸಿಂಗ್ ಆಫೀಸರ್ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ನರ್ಸಿಂಗ್ ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇದು ಸುವರ್ಣಾವಕಾಶವಾಗಿದೆ.
ಪ್ರಮುಖ ವಿವರಗಳು:
ಒಟ್ಟು ಹುದ್ದೆಗಳು:
2,551
ಹುದ್ದೆಯ ಹೆಸರು:
ನರ್ಸಿಂಗ್ ಆಫೀಸರ್ (Nursing Officer – Group B)
ವಿದ್ಯಾರ್ಹತೆ:
B.Sc (Hons.) Nursing / B.Sc Nursing ಅಥವಾ GNM ಡಿಪ್ಲೊಮಾ ಜೊತೆಗೆ 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ.
ವಯೋಮಿತಿ:
18 ರಿಂದ 30 ವರ್ಷಗಳು (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಫೆಬ್ರವರಿ 24, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16, 2026 (ಸಂಜೆ 5:00 ರವರೆಗೆ)
ಹಂತ-1 (Prelims) ಪರೀಕ್ಷೆ: ಏಪ್ರಿಲ್ 11, 2026
ಹಂತ-2 (Mains) ಪರೀಕ್ಷೆ: ಏಪ್ರಿಲ್ 30, 2026
ಅರ್ಜಿ ಶುಲ್ಕ:
ಸಾಮಾನ್ಯ/OBC ಅಭ್ಯರ್ಥಿಗಳಿಗೆ: ₹3,000
SC/ST/EWS ಅಭ್ಯರ್ಥಿಗಳಿಗೆ: ₹2,400
ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು AIIMS ನ ಅಧಿಕೃತ ವೆಬ್‌ಸೈಟ್ www.aiimsexams.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.





Leave a comment