Home ಉದ್ಯೋಗ ವಾರ್ತೆ ಭಾರತೀಯ ಸೇನಾ ನೇಮಕಾತಿ: ಮಂಗಳೂರು ಕಚೇರಿಯಿಂದ ಅಗ್ನಿವೀರ್ ರ‍್ಯಾಲಿಗೆ ಅರ್ಜಿ ಆಹ್ವಾನ – ಏಪ್ರಿಲ್ 10 ರವರೆಗೆ ಅವಕಾಶ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಭಾರತೀಯ ಸೇನಾ ನೇಮಕಾತಿ: ಮಂಗಳೂರು ಕಚೇರಿಯಿಂದ ಅಗ್ನಿವೀರ್ ರ‍್ಯಾಲಿಗೆ ಅರ್ಜಿ ಆಹ್ವಾನ – ಏಪ್ರಿಲ್ 10 ರವರೆಗೆ ಅವಕಾಶ

Share
ಸೇನಾ ನೇಮಕಾತಿ
Share

ದಾವಣಗೆರೆ: ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಆಗಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಮಂಗಳೂರು ಸೇನಾ ನೇಮಕಾತಿ ಕಚೇರಿ (ARO Mangaluru) ವತಿಯಿಂದ ಸುವರ್ಣಾವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಮಂಗಳೂರು ಕಚೇರಿ ವ್ಯಾಪ್ತಿಗೆ ಬರುವ ಜಿಲ್ಲೆಗಳ ಯುವಕರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಕ್ಲರ್ಕ್, ತಾಂತ್ರಿಕ (Technical) ಮತ್ತು ಟ್ರೇಡ್ಸ್‌ಮನ್ (8 ಮತ್ತು 10ನೇ ತರಗತಿ) ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 10, 2026 ಕೊನೆಯ ದಿನಾಂಕವಾಗಿದೆ.

ಅರ್ಜಿದಾರರು ₹250/- ನೋಂದಣಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಂಗಳೂರು ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನೋಂದಣಿ ಪ್ರಕ್ರಿಯೆಯು www.joinindianarmy.nic.in ವೆಬ್ ಸೈಟ್ ಮೂಲಕ ಫೆಬ್ರವರಿ 13 ರಿಂದ ಅರ್ಜಿ ಸಲ್ಲಿಸಬಹುದು.

ನೋಂದಣಿ 48 ಗಂಟೆಗಳ ಒಳಗೆ ಜೈ ಹಿಂದ್ ಖಾತೆಯನ್ನು ಮತ್ತು ರೂ.250/- ನೋಂದಣಿ ಶುಲ್ಕವನ್ನು ಪಾವತಿಸಬೇಕು.

ಅಪ್ಲಿಕೇಶನ್ ವರ್ಗಗಳು: ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್, ಎಸ್.ಕೆ.ಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟಿಡಿಎನ್ 10, ಅಗ್ನಿವೀರ್ ಟಿಡಿಎನ್ 8ನೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://www.joinindianrmy.nic.in ಹಾಗೂ ದೂ.ಸಂ:0824-2951276, 07411497644 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *